Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳು ಕಾಲಕಾಲಕ್ಕೂ ಪ್ರಸ್ತುತ- ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್

ಮುಲ್ಕಿ: ತಾಲೂಕು ಆಡಳಿತದ ವತಿಯಿಂದ ಕಾರ್ನಾಡ್ ಗೇರುಕಟ್ಟೆ ಬಳಿಯ ಪ್ರಜಾಸೌಧದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 72ನೇ ಜಯಂತಿಯನ್ನು ಆಚರಿಸಲಾಯಿತು
ತಾಲೂಕು ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಭಾರತದ ಮಹಾನ್ ಸಂತ, ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರಾಗಿದ್ದರು ಜಾತಿ ಮತ್ತು ಮತಗಳ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಮಾನವತಾವಾದವನ್ನು ಪ್ರತಿಪಾದಿಸಿದ್ಧರು. ಅವರ ಆದರ್ಶಗಳು ಕಾಲಕಾಲಕ್ಕೂ ಪ್ರಸ್ತುತ ಎಂದರು 
ಈ ಸಂದರ್ಭ ತಾಲೂಕು ಉಪ ತಹಶಿಲ್ದಾರ್ ವಿಲ್ಮಾ ಡಿಕೋಸ್ಟ, ಕಂದಾಯ ಇಲಾಖೆಯ ಅಧಿಕಾರಿ ಮೋಹನ್ ಹಾಗೂ ತಾಲೂಕು ಆಡಳಿತ ಕಚೇರಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.