ಮುಲ್ಕಿ:ಯುವ ಜನಾಂಗ ಶಿಸ್ತು ಹಾಗೂ ಸಂಸ್ಕಾರಯುತರಾಗಿರಿ-ಸೈಯದ್ ಎಂ ಎಸ್ ತಂಙಳ್
ಮುಲ್ಕಿ: ಶಾಫಿ ಜುಮ್ಮಾ ಮಸೀದಿ ವತಿಯಿಂದ ಈದ್ ಮಿಲಾದ್ ಸಮಾರೋಪ ಕಾರ್ಯಕ್ರಮ ಮಸೀದಿ ವಠಾರದಲ್ಲಿ ನಡೆಯಿತು ಕಾರ್ಯಕ್ರಮವನ್ನು ಕಾಸರಗೋಡು ಸಮಸ್ತ ಕೇರಳ ಜಮಾಯತುಲ್ ಉಲೇಮಾ ಅಧ್ಯಕ್ಷರಾದ ಸೈಯದ್ ಎಂ ಎಸ್ ತಂಙಳ್ ಮದನಿ ಒಳೆಮುಂಡೋ ಮಾತನಾಡಿ ಯುವ ಜನಾಂಗ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಮೊಬೈಲ್ ತಂತ್ರಜ್ಞಾನದ ಯುಗದಲ್ಲಿ ಜಾಗೃತರಾಗಿ ಶಿಸ್ತು ಹಾಗೂ ಸಂಸ್ಕಾರಯುತರಾಗಿರಿ ಎಂದರು
ಮಸೀದಿಯ ಗೌರವಾಧ್ಯಕ್ಷ ಇನಾಯತ್ ಆಲಿ ಮಾತನಾಡಿ ಆದರ್ಶ ವ್ಯಕ್ತಿತ್ವ ಪರಿಸರ ಪ್ರೇಮ ಹಾಗೂ ಮಕ್ಕಳ ಜೊತೆ ಪ್ರೀತಿಯ ಮೂಲಕ ಸಮಾಜದಲ್ಲಿ ಗೌರವ ಸ್ಥಾನ ಪಡೆಯಿರಿ ಎಂದು ಯುವಕರಿಗೆ ಕರೆ ನೀಡಿದರು
ಮುಖ್ಯ ಅತಿಥಿಗಳಾಗಿ ಮುಲ್ಕಿ ಶಾಫಿ ಜುಮ್ಮಾ ಮಸೀದಿಯ ಖತೀಬರಾದ ಉಸ್ಮಾನುಲ್ ಫೈಝೀ ತೋಡಾರ್, ಕಾರ್ನಾಡ್ ಮಸೀದಿಯ ಖತೀಬರಾದ ರಿಯಾಝ್ ಫೈಝೀ,ಸಹಾಯಕ ಖತೀಬರಾದ ಖಲೀಲ್ ದಾರೀಮಿ
,ಕೋಶಾಧಿಕಾರಿ ಇಕ್ಬಾಲ್ ಅಹ್ಮದ್,ಉಪಾಧ್ಯಕ್ಷರಾದ ಲಿಯಾಕತ್ ಆಲಿ, ಪುತ್ತು ಬಾವ ,ಅಬ್ದುಲ್ ರಹಿಮಾನ್ ಸಅದಿ , ಅಶ್ರಫ್ ಅಜೆರಿ,, ಅಬ್ದುಲ್ ರಹಿಮಾನ್ ಆರ್ಷದಿ,, ಹಂಝ ಹನೀಫ್,ಬಷೀರ್ ಮೌಲ್ವಿ ಮತ್ತಿತರು ಉಪಸ್ಥಿತರಿದ್ದರು. ಇಕ್ಬಾಲ್ ಅಹ್ಮದ್ ಸ್ವಾಗತಿಸಿದರು ಅಬ್ದುಲ್ ರಜಾಕ್ ಮದನಿ ನಿರೂಪಿಸಿದರು ಬಳಿಕ ಮಿಲಾದ್ ಫೆಸ್ಟ್ ವಿಜೇತ ದರ್ಸ್ ಮತ್ತು ಮದರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು