Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ತಾಲೂಕು ಕಾರ್ನಾಡ್ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ

ಮುಲ್ಕಿ:  ಮುಲ್ಕಿ ತಾಲೂಕು ಕಾರ್ನಾಡ್ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಗಳಿಗೆ  ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ  ಉಮಾನಾಥ ಕೋಟ್ಯಾನ್ ಅವರು ಸೋಮವಾರ  ಚಾಲನೆ ನೀಡಿದರು 
ಶಾಸಕ ಉಮಾನಾಥ ಮಾತನಾಡಿ ಮುಲ್ಕಿ ನಾರಾಯಣ ಗುರು ಸಂಕೀರ್ಣದಿಂದ ಕಾರ್ನಾಡ್ ಸದಾಶಿವ ರಾವ್ ವೃತ್ತದ ವರೆಗೆ ರಾಜ್ಯ ಹೆದ್ದಾರಿಗೆ ಸುಮಾರು 4 ಕೋಟಿ ವೆಚ್ಚದಲ್ಲಿ ಕಾಂಕ್ರಿಟೀಕರಣ ಹಾಗೂ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಸದಾಶಿವ ರಾವ್ ವೃತ್ತದಿಂದ  ಗೇರುಕಟ್ಟೆ ಪ್ರಜಾಸೌಧದ ವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಸುಮಾರು 5 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಒಟ್ಟು 9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು.  ಮುಲ್ಕಿಯಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ ಕಟ್ಟಡ ಕಾಮಗಾರಿ ಈಗಲೇ ಈಗಾಗಲೇ ಮುಗಿದಿದೆ ಇದನ್ನು ಶೀಘ್ರ ಲೋಕಾರ್ಪಣೆ ಮಾಡಲಾಗುವುದು ಮತ್ತು ಕ್ಷೇತ್ರ ವ್ಯಾಪ್ತಿಯ ಮರವೂರು,ಕಟೀಲು, ಬಳ್ಕುಂಜೆ ಯಲ್ಲಿ ಸುಮಾರು 98 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯಗಳು ನಡೆಯಲಿದೆ ಮತ್ತು ಶೀಘ್ರದಲ್ಲಿ  ಗೇರುಕಟ್ಟೆಯಿಂದ ಕಿನ್ನಿಗೋಳಿ  ರಾಜ್ಯ ಹೆದ್ದಾರಿ ಮೂರು ಕಾವೇರಿ ವರೆಗೆ ರಸ್ತೆ ಡಾಮರೀಕರಣ ನಡೆಸಲಾಗುವುದು ಎಂದು ಭರವಸೆ ನೀಡಿದರು
ಕ್ಷೇತ್ರ ವ್ಯಾಪ್ತಿಯಲ್ಲಿ ಅನುದಾನ ನೀಡಲು ಸಹಕರಿಸಿದ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿ ಹೋಳಿ ರವರಿಗೆ ಕೃತಜ್ಞತೆ ಸಲ್ಲಿಸಿದರು 
ಈ ಸಂದರ್ಭ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ,ಮುಲ್ಕಿ ನಗರ ಪಂಚಾಯತ್ ,ಮಾಜೀ ಅಧ್ಯಕ್ಷ ಸತೀಶ್ ಅಂಚನ್ ,ಮಾಜೀ ಸದಸ್ಯರಾದ ಪುತ್ತು ಬಾವ, ಹರ್ಷರಾಜ ಶೆಟ್ಟಿ, ರಾಧಿಕಾ ಕೋಟ್ಯಾನ್, ಸುಭಾಷ್ ಶೆಟ್ಟಿ, ಶೈಲೇಶ್ ಕುಮಾರ್, ಬಿಜೆಪಿ ನಾಯಕರಾದ ರಂಗನಾಥ ಶೆಟ್ಟಿ, ಅಶೋಕ್ ಚಿತ್ರಾಪು, ವಿಠಲ್ ಎನ್ ಎಂ, ರಮೇಶ್ ಹಂಗರಗಿ, ಪ್ರಶಾಂತ್ ಕೆಎಸ್ ರಾವ್ ನಗರ, ಅಶೋಕ್ ಜನನಿ, ವಕೀಲ ಬಸು ಕೆ ಎಸ್ ರಾವ್ ನಗರ, ಮನೋಹರ ಕೋಟ್ಯಾನ್, ರಾಜೇಶ್ ಪೂಜಾರಿ ಕಿಲ್ಪಾಡಿ,ಪ್ರವೀಣ್ ಕೋಟ್ಯಾನ್ ಕಾರ್ನಾಡ್ ಧರ್ಮಸ್ಥಾನ, ಸಾಮಾಜಿಕ ಕಾರ್ಯಕರ್ತ ಮನ್ಸೂರ್ ಹಳೆಯಂಗಡಿ, ಜಯ ಮುದ್ದು ಶೆಟ್ಟಿ ಕೆಂಚನಕೆರೆ, ಗುತ್ತಿಗೆದಾರ ಕೆ ವಿ ಆರ್ ಕನ್ಸ್ಟ್ರಕ್ಷನ್ ನ ಪ್ರಭಾಕರ ಭಟ್, ಸುಧಾಕರ್ ಪೂಂಜ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.