ಮುಲ್ಕಿ: ತುಳುನಾಡ್ ಬಂಟ ಮಹಿಳಾ ಸಂಘದ ವತಿಯಿಂದ ಸೋಣ ಸಂಭ್ರಮ ಹಾಗೂ ಸಾಧಕರಿಗೆ ಗೌರವ
ಮುಲ್ಕಿ: ತುಳುನಾಡ್ ಬಂಟ ಮಹಿಳಾ ಸಂಘದ ವತಿಯಿಂದ ಸೋಣ ಸಂಭ್ರಮ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಕೆಂಚನಕೆರೆ ಅಂಬಾ ನಿವಾಸದ ವೇದಿಕೆಯಲ್ಲಿ ನಡೆಯಿತು.
ಸೋಣ ಸಂಭ್ರಮಕ್ಕೆ ಚಾಲನೆ ನೀಡಿ ಕರ್ನಾಟಕ ರಾಜ್ಯದ ಪರಿಸರ ಮತ್ತು ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿ ಮಹಿಳೆಯರು ಸರ್ವ ಧರ್ಮಿಯರನ್ನು ಪ್ರೀತಿಸುವುದರ ಜೊತೆಗೆ ಸಂಸ್ಕಾರಯುತರಾಗಬೇಕು ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸಮಾಜದ ಆಸ್ತಿಯಾಗಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಂಘದ ಅಧ್ಯಕ್ಷೆ ಶಮೀನಾ ಆಳ್ವ ವಹಿಸಿ ಮಾತನಾಡಿ ಆಧುನಿಕ ಯುಗದಲ್ಲಿ ಮಹಿಳೆಯರು ಸ್ವ ಉದ್ಯೋಗದ ಮೂಲಕ ಸಾಧಕರಾಗುತ್ತಿದ್ದಾರೆ
ಮಹಿಳೆಯರು ಜೀವನದಲ್ಲಿ ಮುಂದೆ ಬರಲು ವಿವಿಧ ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕು ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ,ತುಳುನಾಡ್ ಬಂಟ ಮಹಿಳಾ ಸಂಘದ ಉಪಾಧ್ಯಕ್ಷೆ ರೋಹಿಣಿ ಶೆಟ್ಟಿ,ಕಾರ್ಯದರ್ಶಿ ಕುಸುಮಾ ರವೀಂದ್ರ ಶೆಟ್ಟಿ, ಕೋಶಾಧಿಕಾರಿ ಜ್ಯೋತಿ ಅಶೋಕ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಕರ್ನಾಟಕ ರಾಜ್ಯದ ಪರಿಸರ ಮತ್ತು ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ ರವರನ್ನು ಸನ್ಮಾನಿಸಲಾಯಿತು ಹಾಗೂ ಹರಿಯಾಣದಲ್ಲಿ ನಡೆಲಿರುವ ಎನ್ಎಸ್ಎಸ್ ಕ್ಯಾಂಪ್ ನಲ್ಲಿ ಭಾಗವಹಿಸಲು ಆಯ್ಕೆಯಾದ ವಿದ್ಯಾರ್ಥಿನಿ ದೀಪ್ತಿ ಜೆ ಶೆಟ್ಟಿ ಹಾಗೂ ಶೈಕ್ಷಣಿಕ ಸಾಧಕಿ ಹರ್ಷ ಜೆ ಶೆಟ್ಟಿ ರವರನ್ನು ಗೌರವಿಸಲಾಯಿತು
ಶಮೀನಾ ಆಳ್ವ ಸ್ವಾಗತಿಸಿದರು, ರೋಹಿಣಿ ಶೆಟ್ಟಿ ಧನ್ಯವಾದ ಅರ್ಪಿಸಿದರು, ಕುಸುಮ ಶೆಟ್ಟಿ ನಿರೂಪಿಸಿದರು