Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಭಕ್ತಿ ಭಾವದ ಋಗುಪಾಕರ್ಮ ಆಚರಣೆ



ಮುಲ್ಕಿ: ಪರಿಸರದ ದೇವಸ್ಥಾನಗಳಲ್ಲಿ
ಋಗುಪಾಕರ್ಮ ಆಚರಣೆ ಭಕ್ತಿ ಭಾವದಿಂದ ನಡೆಯಿತು
ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕರಾದ ಶ್ರೀಪತಿ ಭಟ್ ಹಾಗೂ ನರಸಿಂಹ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ನಡೆಯಿತು 
ಬಳಿಕ ಪೂಜೆ,ಪ್ರಸಾದ ವಿತರಣೆ ನಡೆಯಿತು
ಈ ಸಂದರ್ಭ ಕ್ಷೇತ್ರದ ಅರ್ಚಕರಾದ ಪ್ರಸಾದ್ ಭಟ್, ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು 
ಮುಲ್ಕಿ ಪರಿಸರದ ಶಿಮಂತೂರು, ತೋಕೂರು,ಪಾವಂಜೆ,ಕಲ್ಲಾಪು, ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಮತ್ತಿತರ ಧಾರ್ಮಿಕ ಕ್ಷೇತ್ರಗಳಲ್ಲಿ ಋಗುಪಾಕರ್ಮ ಆಚರಣೆ ಭಕ್ತಿ ಭಾವದಿಂದ ನಡೆಯಿತು