ಮುಲ್ಕಿ:ಶ್ರೀ ನಾರಾಯಣಗುರುಗಳ ಭಾವಚಿತ್ರದ ಭವ್ಯ ಶೋಭಾಯಾತ್ರೆ
ಮುಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಿತು
ಬೆಳಿಗ್ಗೆ ಗಂಟೆ 6:30ರಿಂದ : ಶ್ರೀ ನಾರಾಯಣಗುರು ಭಜನಾ ಮಂಡಳಿ ಹಾಗೂ
ಮಹಿಳಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು
ಸಂಜೆ ಗಂಟೆ 3ರಿಂದ :
ಶ್ರೀ ನಾರಾಯಣಗುರುಗಳ ಭಾವಚಿತ್ರದ ಶೋಭಾಯಾತ್ರೆಯು ಕಕ್ವ ಕೊಲಕಾಡಿ ಗ್ರಾಮಸ್ಥರ ಕೂಡುವಿಕೆಯೊಂದಿಗೆ ವಿವಿಧ ಬಿರುದಾವಳಿಗಳೊಂದಿಗೆ ಕಕ್ವ ಕೊಲಕಾಡಿ ಬರ್ಕೆ ಕುಟುಂಬಸ್ಥರ "ಬರ್ಕೆ ಧರ್ಮಚಾವಡಿ"ಯಲ್ಲಿ ಗುರುಪೂಜೆ ನಡೆದು ಮಾನಂಪಾಡಿ ಸಂಕದ ರಸ್ತೆ - ಕೆಂಪುಗುಡ್ಡೆ ಮೂರು ಮಾರ್ಗ ದರ್ಗಾ ರಸ್ತೆ -ಕಾರ್ನಾಡು – ಚರಂತಿಪೇಟೆ - ಮುಲ್ಕಿ ಬಸ್ ನಿಲ್ದಾಣ - ಹೊಸಪೇಟೆ ಬಪ್ಪನಾಡು ದೇವಸ್ಥಾನ - ಪಂಚಮಹಲ್ ರಸ್ತೆಯಾಗಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘವನ್ನು ತಲುಪಿ ವಿಶೇಷ ಪೂಜೆ ನಡೆಯಿತು
ಶಾಸಕ ಉಮಾನಾಥ ಕೋಟ್ಯಾನ್ ಸಂಘಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು,,ಕಾರ್ಯದರ್ಶಿ ಜಯಕುಮಾರ್ ಕುಬೆವೂರು, ಮುಲ್ಕಿ ನಗರ ಪಂಚಾಯತ್ ಮಾಜೀ ಅಧ್ಯಕ್ಷ ಸತೀಶ್ ಅಂಚನ್, ಬಿರುವೆರ್ ಕುಡ್ಲ ಮುಲ್ಕಿ ಘಟಕದ ಗೌರವಾಧ್ಯಕ್ಷ ಕಿಶೋರ್ ಸಾಲ್ಯಾನ್, ಶ್ರೀ ನಾರಾಯಣ ಗುರು ಸಂಸ್ಥೆಗಳ ಸಂಚಾಲಕ ಹರೀoದ್ರ ಸುವರ್ಣ, ಹೆಜ್ಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ ದಾಸ ಹೆಜಮಾಡಿ, ಜನಾರ್ದನ ಬಂಗೇರ, ಕೆ ಎಸ್ ರಾವ್ ನಗರ,ವಾಸು ಪೂಜಾರಿ ಚಿತ್ರಾಪು, ಚಂದ್ರಶೇಖರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು