ಮುಲ್ಕಿ: ಶ್ರೀ ಶಿವ ಚರಣ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಆಚರಣೆಗೆ ಮಾತ್ರ ಸೀಮಿತವಾಗದೆ ಸಮಾಜವನ್ನು ಗೌರವಿಸಬೇಕು- ಸುನಿಲ್ ಆಳ್ವ
ಮುಲ್ಕಿ:ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನೂತನ ಘಟಕದ ಉದ್ಘಾಟನೆ ಹಾಗೂ ಶ್ರೀ ನಿಜ ಸುಖಿ ಶಿವ ಚರಣ ಹಡಪದ ಅಪ್ಪಣ್ಣನವರ 892 ನೇ ಜಯಂತ್ಯೋತ್ಸವ ಕಾರ್ಯಕ್ರಮ
ಮಂಗಳವಾರ ಸಂಜೆ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು
ನೂತನ ಸಂಘವನ್ನು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ದೇವು ಕೃಷ್ಣಪ್ಪ ಹಡಪದ ಮುಂಡರಗಿ ಹಾಗೂ ಸಂಚಾಲಕರಾದ ಮಲ್ಲು ಅಂಬ್ರಪ್ಪ ಹಡಪದ ಕೊಡಲಸಂಗಮ ಉದ್ಘಾಟಿಸಿದರು
ಶ್ರೀ ನಿಜ ಸುಖಿ ಶಿವ ಚರಣ ಹಡಪದ ಅಪ್ಪಣ್ಣನವರ 892 ನೇ ಜಯಂತ್ಯೋತ್ಸವವನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ
ಸುನಿಲ್ ಆಳ್ವ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಶ್ರೀ ನಿಜ ಸುಖಿ ಶಿವ ಚರಣ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಆಚರಣೆಗೆ ಮಾತ್ರ ಸೀಮಿತವಾಗದೆ ಸಮಾಜವನ್ನು ಗೌರವಿಸಬೇಕು. ಅವರ ಬದುಕನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಶ್ರಮಜೀವಿಗಳಾಗಿ ದೇಶ ಕಟ್ಟುವ ಕಾರ್ಯ ನಡೆಸೋಣ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ
ಮಂಗಳೂರು ಹಡಪದ ಸಮಾಜದ ಅಧ್ಯಕ್ಷ ಮಲೇಶ್ ಬಿ.ಮುಲ್ಕಿನಗರ ಪಂಚಾಯಿತಿ ಮಾಜೀ ಸದಸ್ಯ ಶೈಲೇಶ್ ಕುಮಾರ್
ಸುರತ್ಕಲ್ ಲೈಟ್ ಹೌಸ್
ಸಂಗಮ ಇಂಡಿಯನ್ ನ್ಯಾವಿಗೇಷನ್ ಆಫಿಸರ್
ವಿಜಯ್ ಮಾಂತೇಶ್ , ಬಿಜೆಪಿ ಮುಖಂಡ
ವಿಠಲ್ ಎಂ ಎನ್ , ಸಮಾಜ ಸೇವಕ
ಭೀಮಶಂಕರ ಆರ್ ,ಕೆ ಸಂಘದ ಅಧ್ಯಕ್ಷ
ಗಿರಿಮಲ್ಲ ಹಡಪದ,ಮತ್ತಿತರರು ಉಪಸ್ಥಿತರಿದ್ದರು
ಸಮಾಜ ಸೇವಕ ಶಿವಾನಂದ ಆರ್ ಕೆ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು ಹಾಗೂ ಎಸ್ ಎಸ್ ಎಲ್ ಸಿ ಪಿಯುಸಿ ಸಾಧಕರನ್ನು ಗೌರವಿಸಲಾಯಿತು