Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಆ.29:ರಂಗಕಲಾವಿದ, ಸಾಹಿತಿ ಶಶಿರಾಜ್ ಕಾವೂರ್ ಜೊತೆ ಮಾತುಕತೆ


ಮೂಲ್ಕಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಸಂಯೋಜನೆಯಲ್ಲಿ ಖ್ಯಾತ ರಂಗಭೂಮಿ ಕಲಾವಿದ, ನಿರ್ದೇಶಕ, ಸಾಹಿತಿ, ಗೀತರಚನಕಾರ ಶಶಿರಾಜ್ ರಾವ್ ಕಾವೂರು ಇವರ ಜೊತೆ ಮಾತುಕತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೂಲ್ಕಿ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರೊಂದಿಗೆ ಸಂವಾದ ತಾ.29 ರ ಶನಿವಾರ ಬೆಳಿಗ್ಗೆ ಗಂಟೆ 10 ರಿಂದ ಮೂಲ್ಕಿ ಕಾರ್ನಾಡು ಸರಕಾರಿ ಪದವೀಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಕಾಂತಾರ ಸೇರಿದಂತೆ ತುಳು ಕನ್ನಡ ಸಿನಿಮಾಗಳಿಗೆ ಗೀತೆ, ಶಿವಾಜಿ ಸೇರಿದಂತೆ ಹತ್ತಾರು ನಾಟಕಗಳನ್ನು ಬರೆದಿರುವ ಶಶಿರಾಜ್ ಅವರು ಬರೆದಿರುವ ಹಾಡುಗಳನ್ನು ಝೀಕನ್ನಡದ ಸರಿಗಮಪ ಲಿಟಲ್ ಚಾಂಪ್ ವಿಜೇತ ಅಸ್ಮಿತ್ ಎ.ಜೆ. ಹಾಡಲಿದ್ದಾರೆ ಎಂದು ಕಸಾಪ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.