ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮುಲ್ಕಿ ಪಟ್ಟಣದ ಕಾರ್ನಾಡ್ ಗಾಂಧಿ ಮೈದಾನದಲ್ಲಿ 80 ನೇ ಸ್ವಾತಂತ್ರ್ಯೋತ್ಸವ
ಮುಲ್ಕಿ :ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮುಲ್ಕಿ ಪಟ್ಟಣದ ಕಾರ್ನಾಡ್ ಗಾಂಧಿ ಮೈದಾನದಲ್ಲಿ 80 ನೇ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿಂದ ನಡೆಯಿತು
ಮುಲ್ಕಿ ತಹಶಿಲ್ದಾರ್ ಪುಥ್ವೀ ಸಾನಿಕಂ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಹಿರಿಯರು ಬಲಿದಾನಗೈದು ದೇಶಕ್ಕಾಗಿ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಂಡು ಸಮಾನತೆಯ ಬದುಕು ಮುಖ್ಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ವಹಿಸಿ ಮಾತನಾಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರ ವಿಕಸಿತ ಭಾರತದ ಪರಿಕಲ್ಪನೆಗೆ ಯುವ ಜನಾಂಗ ಬೆಂಬಲ ನೀಡಬೇಕಾಗಿದೆ. ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಮುಲ್ಕಿ ಯಿಂದ ಕಾರ್ನಾಡ್ ಗೇರುಕಟ್ಟೆ ವಿಕಾಸಸೌಧದ ವರೆಗೆ ರಸ್ತೆ ಅಗಲೀಕರಣಕ್ಕೆ 9 ಕೋಟಿ ಮೀಸಲಿಡಲಾಗಿದೆ
ಕ್ಷೇತ್ರ ವ್ಯಾಪ್ತಿಯ ಕಟೀಲು, ಮರವೂರು ಹಾಗೂ ಬಳ್ಕುಂಜೆ ಭಾಗದಲ್ಲಿ ನೂತನ ಸೇತುವೆಗಳಿಗೆ 98 ಕೋಟಿ ವೆಚ್ಚದ ನೂತನ ಸೇತುವೆಗಳಿಗೆ ಈಗಾಗಲೇ ಅನುಮೋದನೆ ದೊರಕಿದ್ದು ಸದ್ಯದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು. ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು
ಮುಖ್ಯ ಅತಿಥಿಗಳಾಗಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷೆ
ಶೆರ್ಲಿ ಸುಮಾಲಿನಿ,ಪಶು ವೈದ್ಯಾಧಿಕಾರಿ ಡಾ.ವಿಶ್ವಾರಾಧ್ಯ ಕಿನ್ನಿಗೋಳಿ ಪ.ಪಂ. ಮುಖ್ಯಾಧಿಕಾರಿ ಜಯಶಂಕರ್,ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್,
ಮಾಜೀ ಅಧ್ಯಕ್ಷ ಸುನಿಲ್ ಆಳ್ವ, ಸತೀಶ್ ಅಂಚನ್,
ಮಾಜೀ ಸದಸ್ಯರಾದ ಪುತ್ತು ಬಾವ, ಹರ್ಷರಾಜ ಶೆಟ್ಟಿ, ಶೈಲೇಶ್ ಕುಮಾರ್, ರಾಧಿಕಾ ಕೋಟ್ಯಾನ್,ದಯಾವತಿ ಅಂಚನ್, ಸುಭಾಷ್ ಶೆಟ್ಟಿ, ಬಾಲಚಂದ್ರ ಕಾಮತ್,ತಾಲೂಕು ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಜೀವನ್ ಶೆಟ್ಟಿ,ಮೂಡಬಿದ್ರೆ ಉಪವಲಯ ಅರಣ್ಯಾಧಿಕಾರಿ ನಿಂಗಪ್ಪ,
ಗೃಹರಕ್ಷಕ ದಳದ ನಿವೃತ್ತ ಅಧಿಕಾರಿ ಮನ್ಸೂರು ಹಳೆಯಂಗಡಿ,ಮುಲ್ಕಿ ಪೊಲೀಸ್ ಠಾಣಾ ಎ ಎಸ್ ಐ ಸಂಜೀವ, ವಿನೋದ್ ಸಾಲ್ಯಾನ್ ಬೆಳ್ಳಾಯರು, ನವೀನ್ ರಾಜ್, ವಿಠಲ್ ಎನ್ ಎಂ, ರಮೇಶ್ ಹಂಗರಗಿ
ಮತ್ತಿತರರು ಉಪಸ್ಥಿತರಿದ್ದರು
ಮುಲ್ಕಿ ಠಾಣಾಧಿಕಾರಿ ರಾಘವೇಂದ್ರ ನಾಯಕ್ ರವರು ಪೆರೇಡ್ ಕಮಾಂಡರ್ ನೇತೃತ್ವ ವಹಿಸಿದ್ದರು
ಮುಲ್ಕಿ ಪೊಲೀಸ್, ಗೃಹ ರಕ್ಷಕ ದಳ ಹಾಗೂ ವಿವಿಧ ಶಾಲಾ ಕಾಲೇಜುಗಳ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು ಹಾಗೂ ತಾಲೂಕು ಮಟ್ಟದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಸಾಧಕರನ್ನು ಗೌರವಿಸಲಾಯಿತು
ಪಥ ಸಂಚಲನದಲ್ಲಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಗೈಡ್ ತಂಡ ಹಾಗೂ ಸ್ಕೌಟ್ಸ್ ತಂಡ(ಪ್ರ), ಪಿಎಂ ಶ್ರೀ ಕೆಎಸ್ ರಾವ್ ನಗರ ಶಾಲೆ ಹಾಗೂ ಎಂಸಿಟಿ ಪಬ್ಲಿಕ್ ಶಾಲೆ ಕಿಲ್ಪಾಡಿ(ದ್ವಿ),ಕಾರ್ನಾಡ್ ಸಿ ಎಸ್ ಐ ಪ್ರೌಢ ಶಾಲೆ,ಶ್ರೀ ನಾರಾಯಣಗುರು ಸ್ಕೌಟ್ಸ್ ತಂಡ (ತೃ) ಪ್ರಶಸ್ತಿ ಪಡೆಯಿತು
ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ ವಾಸುದೇವ ಬೆಳ್ಳೆ ಸ್ವಾಗತಿಸಿದರು
ವಕೀಲ ಭಾಸ್ಕರ ಹೆಗ್ಡೆ, ಶಿಕ್ಷಕಿ ಪ್ರೇಮಾ ಆರ್ ಶೆಟ್ಟಿ ನಿರೂಪಿಸಿದರು(ಚಿತ್ರ ಇದೆ: ತಾಲೂಕು ವ್ಯಾಪ್ತಿಯ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು)