ಮುಂಬೈನ ಪ್ರತಿಷ್ಠಿತ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಮುಲ್ಕಿ ಶಾಖೆಯಲ್ಲಿ 48 ನೇ ವಾರ್ಷಿಕೋತ್ಸವ
ಮುಲ್ಕಿ:ಮುಂಬೈನ ಪ್ರತಿಷ್ಠಿತ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಮುಲ್ಕಿ ಶಾಖೆಯಲ್ಲಿ 48ನೇ ವಾರ್ಷಿಕೋತ್ಸವ ಮುಲ್ಕಿ ಬಸ್ ನಿಲ್ದಾಣದ ಬಳಿಯ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮವನ್ನು ಹೆಜಮಾಡಿ
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜ್ಮಾಡಿ
ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಬ್ಯಾಂಕುಗಳು ಜನ ಸ್ನೇಹಿಯಾದರೆ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಬ್ಯಾಂಕಿನ ಸ್ಥಾಪಕ ಅಧ್ಯಕ್ಷ ದಿ. ಜಯ ಸುವರ್ಣ ರವರ ಕನಸಿನ ಕೂಸಾದ ಭಾರತ್ ಕೋ ಆಪರೇಟಿವ್ ಬ್ಯಾಂಕ್ ರಾಷ್ಟ್ರೀಯ ಬ್ಯಾಂಕುಗಳಿಗೆ ಸರಿ ಸಮಾನಾಗಿ ಗ್ರಾಹಕರ ವಿಶ್ವಾಸ ಗಳಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು ಅವರು ಮಾತನಾಡಿ ಭಾರತ್ ಬ್ಯಾಂಕ್ ಗ್ರಾಹಕರಿಗೆ 10% ಡಿವಿಡೆಂಟ್ ನೀಡಿದ್ದು, 20 ಸಾವಿರ ಕೋಟಿ ವಹಿವಾಟು ನಡೆಸಿ 77 ಕೋಟಿ ಲಾಭಗಳಿಸಿದೆ, ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ ಹಾಗೂ ತಂಡದ ಶ್ರಮ ಹಾಗೂ ಸಾಧನೆ ಅಭಿನಂದನೀಯ ಎಂದರು
ಮುಲ್ಕಿ ನಗರ ಪಂಚಾಯತ್ ಮಾಜೀ ಮುಖ್ಯಾಧಿಕಾರಿ ಹರೀಶ್ಚಂದ್ರ ಪಿ ಸಾಲ್ಯಾನ್ ಮಾತನಾಡಿ
ಹಿರಿಯರಾದ ದಿ. ಜಯ ಸುವರ್ಣ ರವರು ಶ್ರಮಪಟ್ಟು ಬೆಳೆಸಿದ ಭಾರತ್ ಬ್ಯಾಂಕ್ ಇಂದು ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ದೊಡ್ಡ ಆಸ್ತಿಯಾಗಿ ಬೆಳೆದಿದೆ, ಸಾಧನೆ ನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು
ಉಪನ್ಯಾಸಕ ಅತ್ತಾವರ್ ನೀರೇಂದ್ರ ಮಾತನಾಡಿ ಗ್ರಾಹಕರ ಜೊತೆ ಜನಸ್ನೇಹಿಯಾಗಿ ಸೇವಾ ಮನೋಭಾವನೆ ಮೂಲಕ ಭಾರತ್ ಬ್ಯಾಂಕ್ ನ ಉನ್ನತ ಮಟ್ಟಕ್ಕೇರಲಿ ಎಂದರು
ಮುಖ್ಯ ಅತಿಥಿಗಳಾಗಿ ದೇವೇಂದ್ರ ಬಂಗೇರ ಮುಂಬೈ,ಮುಲ್ಕಿ ನಗರ ಪಂಚಾಯತ್ ಮಾಜೀ ಸದಸ್ಯ ಯೋಗೀಶ್ ಕೋಟ್ಯಾನ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್, ವಕೀಲ ಹಾಗೂ ನೋಟರಿ ಬಿಪಿನ್ ಪ್ರಸಾದ್,ತಾರನಾಥ ಸುವರ್ಣ ಅಡ್ವೆ, ಶೀನ ಪೂಜಾರಿ ಪಡುಬಿದ್ರೆ, ಲತಾ ಶೇಖರ್ ಕೊಳಚಿ ಕಂಬಳ, ಶಿವರಾಮ್ ಜಿ ಅಮೀನ್, ಸುರೇಶ್ ಪೂಜಾರಿ ಬಪ್ಪನಾಡು, ರೇಷ್ಮಾ ಮಂಜುನಾಥ್, ಜಯಕುಮಾರ್ ಕುಬೆವೂರು, ಬಾಲಚಂದ್ರ ಸನಿಲ್, ಜಗನ್ನಾಥ ರೈ, ರಮಾನಂದ ಎಸ್ ಕೋಟ್ಯಾನ್ ಪಡುಬೈಲು ಶಶಿಧರ ಕೋಟ್ಯಾನ್ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗ, ಗ್ರಾಹಕರು ಮತ್ತಿತರರು ಉಪಸ್ಥಿತರಿದ್ದರು ಶಾಖಾ ಪ್ರಬಂಧಕಿ ಶಕುಂತಲಾ ನೀರೇಂದ್ರ ಸ್ವಾಗತಿಸಿ ನಿರೂಪಿಸಿದರು