Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...





ಮುಲ್ಕಿ: ವಿಶ್ವನಾಥ್ ಭಟ್‌ರವರಿಗೆ ‘ಜ್ಯೋತಿರ್ವಿದ್ಯಾ ಭಾಸ್ಕರ’ ಪ್ರಶಸ್ತಿ ಪ್ರಧಾನ, 35ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ; ದಂಪತಿಗೆ ವಿಶೇಷ ಗೌರವ

ಮುಲ್ಕಿ: ಖ್ಯಾತ ಜ್ಯೋತಿಷಿ ವಿಶ್ವನಾಥ್ ಭಟ್ ರವರಿಗೆ  ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ‘ಜ್ಯೋತಿರ್ವಿದ್ಯಾ ಭಾಸ್ಕರ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ದಿನವೇ ವಿಶ್ವನಾಥ್ ಭಟ್ ಹಾಗೂ ಅವರ ಪತ್ನಿ ಉಷಾ ಅವರ 35ನೇ ವಿವಾಹ ವಾರ್ಷಿಕೋತ್ಸವವೂ ಇದ್ದದ್ದು ವಿಶೇಷ. 
ಈ ಹಿನ್ನೆಲೆಯಲ್ಲಿ ದಂಪತಿಯನ್ನು ಆಶ್ರಮದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಆಶೀರ್ವಚನ ನೀಡಿದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, “ಕಾಕತಾಳೀಯವೆಂಬಂತೆ ಪ್ರಶಸ್ತಿ ಪ್ರದಾನಕ್ಕೆ ನಿಗದಿಪಡಿಸಿದ ದಿನವೇ ದಂಪತಿ ದಾಂಪತ್ಯ ಜೀವನದ 35 ವರ್ಷಗಳನ್ನು ಪೂರೈಸಿದ್ದಾರೆ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವ, ಸಹನೆ ಹಾಗೂ ಹೊಂದಾಣಿಕೆಯೊಂದಿಗೆ ಮೂರೂವರೆ ದಶಕಗಳ ದಾಂಪತ್ಯ ಜೀವನ ಸಾಗಿಸಿರುವುದು ಇಂದಿನ ಪೀಳಿಗೆಗೆ ಉತ್ತಮ ನಿದರ್ಶನವಾಗಿದೆ” ಎಂದರು.
“ಜೀವನದ ಸುಖ–ದುಃಖ, ಏಳು–ಬೀಳು ಹಾಗೂ ಹರ್ಷ–ವಿಷಾದಗಳಲ್ಲಿ ಪರಸ್ಪರ ಆಸರೆಯಾಗಿ ಮುನ್ನಡೆದಿರುವ ದಂಪತಿಯ 35 ವರ್ಷಗಳ ಪಯಣ ಕೇವಲ ಕಾಲದ ಲೆಕ್ಕವಲ್ಲ. ಅದು ಪ್ರೀತಿ, ತ್ಯಾಗ, ಸಹನೆ, ಕಾಳಜಿ ಹಾಗೂ ನಂಬಿಕೆಯಿಂದ ರೂಪುಗೊಂಡ ಬದುಕಿನ ಸುಂದರ ಅಧ್ಯಾಯವಾಗಿದೆ. ಹಿರಿಯರ ಆಶೀರ್ವಾದಕ್ಕೆ ಪಾತ್ರರಾಗಿ, ಕಿರಿಯರಿಗೆ ಪ್ರೀತಿಯ ನೆರಳಾಗಿ, ಬಂಧು–ಬಳಗ ಮತ್ತು ಸ್ನೇಹಿತರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿರುವುದು ಶ್ಲಾಘನೀಯ” ಎಂದು ಹೇಳಿದರು.
ದಂಪತಿಯ ದಾಂಪತ್ಯ ಬಂಧ ಮತ್ತಷ್ಟು ಗಟ್ಟಿಯಾಗಲಿ. ಆಯುರಾರೋಗ್ಯ, ಐಶ್ವರ್ಯ, ನೆಮ್ಮದಿ, ಸಂತೃಪ್ತಿ ಹಾಗೂ ಸಕಲ ಸೌಭಾಗ್ಯಗಳು ಅವರ ಬದುಕಿನಲ್ಲಿ ಸದಾ ನೆಲೆಸಲಿ. ಶ್ರೀ ತಿರುಪತಿ ವೆಂಕಟರಮಣ ಸ್ವಾಮಿಯ ಕೃಪಾಕಟಾಕ್ಷದಿಂದ ದಂಪತಿಯ ಜೀವನವು ಶತಮಾನೋತ್ಸವದತ್ತವೂ ಇದೇ ಸೌಹಾರ್ದ, ಸಂತಸ ಮತ್ತು ಸಮೃದ್ಧಿಯೊಂದಿಗೆ ಸಾಗಲಿ ಎಂದು ಹಾರೈಸಿದರು.
ಮಾತೃಶ್ರೀ ಶಾರದಮ್ಮ ಗೋವಿಂದ ಭಟ್, ಸೇವಾಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ಯುವ ಉದ್ಯಮಿ ರಾಹುಲ್ ಚಂದ್ರಶೇಖರ್, ನಿರ್ದೇಶಕ ರಾಘವ ಸೂರ್ಯ, ಕಾನೂನು ಸಲಹೆಗಾರರಾದ ರೋಶಿನಿ ರಾಘವ್ ಸೂರ್ಯ ಹಾಗೂ ಭದ್ರತಾಧಿಕಾರಿ ನಿವೃತ್ತ ಪೊಲೀಸ್ ವರಿಷ್ಟಧಿಕಾರಿ ಜಿ. ಎ. ಭಾವ,ಪ್ರಜ್ವಲ್ ಭಟ್. ಹರ್ಷಿತ ಗುರುರಾಜ್ ಭಟ್ ಕುಮಾರಿ ಪ್ರತಿಷ್ಠಾ ಕುಮಾರಿ ಚಾರ್ವಿ ಆಶ್ರಮದ ಸಂಚಾಲಕ ಪುನಿತ್ ಕೃಷ್ಣ ಉಪಸ್ಥಿತರಿದ್ದರು.