Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಫ್ರೆಂಡ್ಸ್ ಪಡುಬಿದ್ರೆ ತಂಡಕ್ಕೆ ಕಾರ್ನಾಡ್ ಟೀಮ್ ಲೆಜೆಂಡ್ಸ್ ಟ್ರೋಫಿ- 2026

ಮುಲ್ಕಿ:ಕಾರ್ನಾಡ್ ಟೀಮ್ ಲೆಜೆಂಡ್ಸ್  ವತಿಯಿಂದ ಕಾರ್ನಾಡ್ ಗಾಂಧಿ ಮೈದಾನದಲ್ಲಿ ನಡೆದ ಟೀಮ್ ಲೆಜೆಂಡ್ಸ್ ಟ್ರೋಫಿ- 2026 ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್  ಪಡುಬಿದ್ರೆ ತಂಡವು ಮುಲ್ಕಿಯ ಬಪ್ಪನಾಡು ಬಡಗು ಹಿತ್ಲು ಫ್ರೆಂಡ್ಸ್ ತಂಡವನ್ನು ಸೋಲಿಸಿ ಕಾರ್ನಾಡ್ ಟೀಮ್ ಲೆಜೆಂಡ್ಸ್ ಟ್ರೋಫಿ- 2026 ಹಾಗೂ 33,000 ರೂ ನಗದು ಪಡೆಯಿತು. ದ್ವಿತೀಯ ಸ್ಥಾನಿಯಾಗಿ ಮುಲ್ಕಿಯ ಬಪ್ಪನಾಡು ಬಡಗು ಹಿತ್ಲು ಫ್ರೆಂಡ್ಸ್ ತಂಡವು ಟ್ರೋಪಿ ಹಾಗೂ 17,000 ರೂ ನಗದು ಪಡೆಯಿತು
ಅಂತಿಮ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ, ಸರಣಿ ಶ್ರೇಷ್ಠ, ಪ್ರಶಸ್ತಿಯನ್ನು ಫ್ರೆಂಡ್ಸ್ ಪಡುಬಿದ್ರೆ ತಂಡದ ಪ್ರೀತೇಶ್, ಪಡೆದರೆ
ಉತ್ತಮ ಎಸೆತಗಾರ,ಉತ್ತಮ ದಾಂಡಿಗ ಪ್ರಶಸ್ತಿಯನ್ನು ಅದೇ ತಂಡದ ರಿಶಾಲ್ ಮತ್ತು ತರುಣ್ ಪಡೆದರು
 ಗೂಟ ರಕ್ಷಕ ಪ್ರಶಸ್ತಿಯನ್ನು ಬಡಗುಹಿತ್ಲು ತಂಡದ ಶರೀಫ್ ಪಡೆದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಮಾಜೀ ನಗರ ಪಂಚಾಯತ್ ಸದಸ್ಯ  ಹಕೀಮ್ ಕಾರ್ನಾಡ್,
ಉದ್ಯಮಿ ಕಮಲಾಕ್ಷ ಬಡಗುಹಿತ್ಲು, ಮಂಜುನಾಥ್ ಬಪ್ಪನಾಡು, ಶರೀಫ್ ದುಬೈ, ಮೊಹಮ್ಮದ್ ಆಸಿಫ್ ದುಬೈ, ಮೊಹಮ್ಮದ್ ಆಲಿ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ಮುಲ್ಕಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಪಂದ್ಯಾಟಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಪ್ರವೀಣ್ ಪಾವಂಜೆ ನಿರೂಪಿಸಿದರು.