Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಸೀಮೆಯ ಅರಸು ಕಂಬಳದ 2026-27ನೇ ಸಾಲಿನ ಪೂರ್ವಭಾವಿ ಸಭೆ

ಮುಲ್ಕಿ: ಸೀಮೆಯ ಅರಸು ಕಂಬಳದ 2026-27ನೇ ಸಾಲಿನ ಪೂರ್ವಭಾವಿ ಸಭೆ ಭಾನುವಾರ  ಅರಮನೆ ಧರ್ಮ ಚಾವಡಿಯಲ್ಲಿ  ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರ ನೇತೃತ್ವದಲ್ಲಿ ನಡೆಯಿತು 
  ಸಭೆಯಲ್ಲಿ  ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ಮಾತನಾಡಿ ಈ ಬಾರಿ ಸೀಮೆಯ ಅರಸು ಕಂಬಳ ಡಿಸೆಂಬರ್ 26ರಂದು ನಡೆಯಲಿದ್ದು , ಕಂಬಳ ಯಶಸ್ವಿಯಾಗಿ ನಡೆಸಲು ದಾನಿಗಳ , ವಿವಿಧ ಸಂಘ-ಸಂಸ್ಥೆಗಳ ಹಾಗೂ ಸೀಮೆಯ ಕಂಬಳಾಭಿಮಾನಿಗಳ ಸಹಕಾರ ಅಗತ್ಯವಾಗಿದೆ ಎಂದರು. 
ಸಮಿತಿಯ ವಿನೋದ್ ಸಾಲ್ಯಾನ್ ಬೆಳ್ಳಾಯರು ಮಾತನಾಡಿ ಮುಂದಿನ ದಿನಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಭೆ ನಡೆಸಿ ಕಂಬಳದ ಕರೆಯನ್ನು ಶ್ರಮದಾನ ಮೂಲಕ ದುರಸ್ತಿ ಮಾಡುವ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದರು
ಸಭೆಯಲ್ಲಿ  2026-27ನೇ ಸಾಲಿನ ಸೀಮೆಯ ಅರಸು  ಕಂಬಳವನ್ನು ಸೀಮೆಯ ಅರಾಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಯಿತು ಹಾಗೂ ಇದಕ್ಕೆ ಪೂರಕವಾಗಿ ಸಮಿತಿಯನ್ನು ರಚಿಸಲಾಯಿತು ಹಾಗೂ ಅರಸು ಕಂಬಳದ ಅಧ್ಯಕ್ಷರ ಆಯ್ಕೆ ಜವಾಬ್ದಾರಿಯನ್ನು ಸೀಮೆಯ ಅರಸರಿಗೆ ನೀಡಲಾಯಿತು 
ಈ ಸಂದರ್ಭ ವಕೀಲರಾದ ಚಂದ್ರಶೇಖರ ಕಾಸಪ್ಪಯ್ಯನವರ ಮನೆ, ಬಂಕಿನಾಯಕರು, ಹಳೆಯಂಗಡಿ  ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್, ಮಹೀಮ್ ಹೆಗ್ಡೆ, ಜಯಕೃಷ್ಣ ಕೋಟ್ಯಾನ್, ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತಿತರರು ಉಪಸ್ಥಿತರಿದ್ದರು ವಿನೋದ್ ಸಾಲ್ಯಾನ್ ಬೆಳ್ಳಾಯರು ಸ್ವಾಗತಿಸಿ ನಿರೂಪಿಸಿದರು.