Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...




ಮುಲ್ಕಿ: ಮಾರ್ಚ್ 12ರಂದು ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಬ್ರಹ್ಮ ಕಲಶೋತ್ಸವ- ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ ಗುತ್ತಿನಾರ್

ಮುಲ್ಕಿ:ಸೀಮೆಯ ಒಂಬತ್ತು ಮಾಗಣೆಯ ಇತಿಹಾಸ ಪ್ರಸಿದ್ಧ ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಬ್ರಹ್ಮ ಕಲಶೋತ್ಸವ ಮುಂದಿನ ವರ್ಷ  ಮಾರ್ಚ್ 12ರಂದು ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ದೆಪ್ಪುಣಿಗುತ್ತು  ಸುಧಾಕರ ಶೆಟ್ಟಿ  ಗುತ್ತಿನಾರ್  ಹೇಳಿದರು
ಅವರು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಸಭಾಂಗಣದಲ್ಲಿ ನಡೆದ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯ ಸಭೆಯಲ್ಲಿ ಮಾತನಾಡಿದರು 
ಅವರು ಮಾತನಾಡಿ ಕ್ಷೇತ್ರದಲ್ಲಿ ಅಭಿವೃದ್ಧಿ  ಹಾಗೂ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ದಾನಿಗಳ, ಭಕ್ತರ ಸಹಕಾರ ಬೇಕು. ಎಂದು ವಿನಂತಿಸಿದರು 
ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವ ಚಂದ್ರ ಶೆಟ್ಟಿ ಮತ್ತು ಮುಂಬೈ ಸಮಿತಿಯ ಅಧ್ಯಕ್ಷ ವಿಜಿತ್ ಟಿ ಶೆಟ್ಟಿ ಪುತ್ತೂರು ಬಾಳಿಕೆ ರವರು ಮಾತನಾಡಿದರು 
ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಜನಾನಂದ ಶೆಟ್ಟಿ ತಿಂಗೊಳೆ ಮನೆ, ಪ್ರಧಾನ ಕಾರ್ಯದರ್ಶಿ, ಗಂಗಾಧರ ಶೆಟ್ಟಿ ಬರ್ಕೆ ತೋಟ, ರಾಮದಾಸ ಶೆಟ್ಟಿ ಪುತ್ತೂರು ಬಾಳಿಕೆ, ಚೇತನ್ ಶೆಟ್ಟಿ ನಾಲದ ಮನೆ, ಸುಧೀರ್ ಶೆಟ್ಟಿ ನಾಲದ ಮನೆ, ಅಶುತೋಶ್ ಶೆಟ್ಟಿ ಮೂಡುಮನೆ, ಭೋಜರಾಜ್ ಶೆಟ್ಟಿ ಎಲ್ಲದಡಿ, ಶೇಖರ ಪೂಜಾರಿ ಸಾನದ ಮನೆ, ಮುಲ್ಕಿ ವಿಜಯಾ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಶಶಿಧರ ಶೆಟ್ಟಿ ತಿಮಿರುಗುತ್ತು, ವಿಜಯ ಕುಮಾರ್ ಶೆಟ್ಟಿ ಮೈಲೊಟ್ಟು ಉತ್ತಮ್ ಪೂಜಾರಿ ಮೈಲೊಟ್ಟು,  ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಉದಯ ಭಂಡಾರಿ ಮುಂಬೈ,
ಕರುಣಾಕರ ಪೂಜಾರಿ ಮೈಲೊಟ್ಟು, ಪ್ರಸಾದ್ ಶೆಟ್ಟಿ,
ಜಗದೀಶ್ ಶೆಟ್ಟಿದೆಪ್ಪುಣಿಗುತ್ತು, ಪ್ರವೀಣ್ ಶೆಟ್ಟಿ ತಿಂಗೊಳೆ ಮನೆ, ಭರತ್ ಶೆಟ್ಟಿ ಬಾಳಿಕೆ ಮನೆ, ಇಂಜಿಯರ್ ಜೀವನ್ ಶೆಟ್ಟಿ ಕಾರ್ನಾಡ್,  ಹರ್ಷಿತ್ ಶೆಟ್ಟಿ, ದೀಪಕ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 
ಪ್ರಧಾನ ಕಾರ್ಯದರ್ಶಿ,
ಗಂಗಾಧರ ಶೆಟ್ಟಿ ಬರ್ಕೆ ತೋಟ ಸ್ವಾಗತಿಸಿ ನಿರೂಪಿಸಿದರು