Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಪ್ಪನಾಡು ದೇವಾಡಿಗ ಸಮಾಜ ಸೇವಾ ಸಂಘದ 12 ನೇ ವರ್ಷದ ಆಟಿದ ಕೂಟ

ಮುಲ್ಕಿ:ಬಪ್ಪನಾಡು ದೇವಾಡಿಗ ಸಮಾಜ ಸೇವಾ ಸಂಘದ 12 ನೇ ವರ್ಷದ ಆಟಿದ ಕೂಟ ಕಾರ್ಯಕ್ರಮವು ಮಹಿಳಾ ಮತ್ತು ಯುವ ಸಂಘಟನೆಯ ಸಹಯೋಗದೊಂದಿಗೆ
ಬಾನುವಾರದಂದು  ಸಂಘದ ಸಭಾಭವನದಲ್ಲಿ ನಡೆಯಿತು
 ಹಳೆಯಂಗಡಿ ಪ್ರಿಯ ದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ  ವಸಂತ ಬೆರ್ನಾಡ್ ರವರು ಕಾರ್ಯಕ್ರಮವನ್ನು ದೀವ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಕಷ್ಟದ ಬದುಕು ನಡೆಸುತ್ತಿದ್ದ ಆಷಾಡ ದಿನಗಳು ಇಂದು ಬದಲಾಗಿದೆ. ಆಷಾಢ ಮಾಸವು ಆಧ್ಯಾತ್ಮಿಕ ಸಾಧನೆಗೆ, ದೇವತಾ ಆರಾಧನೆಗೆ, ಮಳೆಗಾಲದ ನೈಸರ್ಗಿಕ ಆರಾಧನೆಗೆ ಮಹತ್ವದ್ದಾಗಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಉದ್ಯಮಿ ಜಯ ಕೃಷ್ಣ ಕೋಟ್ಯಾನ್ ಹಳೆಯಂಗಡಿ, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ಮರೋಡಿ,  ಕು.ಪ್ರಾಗ್ಯ ಗಿಚ್ಚಿಗಿಲಿಗಿಲಿ ,
ಬಪ್ಪನಾಡು ದೇವಾಡಿಗ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ದೇವಾಡಿಗ, ಹಿರಿಯರಾದ ದೊಡ್ಡಣ್ಣ ಮೊಯಿಲಿ,
 ಪ್ರಧಾನ ಕಾರ್ಯದರ್ಶಿ ನಾಗರತ್ನ ಬಿ ಎಸ್  , ಕೋಶಾಧಿಕಾರಿ ದಿವ್ಯ ಪಿ ದೇವಾಡಿಗ, ಯುವ ಸಂಘಟನೆ ಅಧ್ಯಕ್ಷ ಧನಂಜಯ ದೇವಾಡಿಗ ಪಂಜಿನಡ್ಕ, ಮಹಿಳಾ ಸಂಘಟನೆ ಅಧ್ಯಕ್ಷೆ ಶುಭವತಿ ಪಿ ದೇವಾಡಿಗ ಕೆಎಸ್ ರಾವ್ ನಗರ ಮತ್ತಿತರರು
ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕಲಾ ವಾರಿಧಿ ಸುರೇಶ್ ಕೊಲಕಾಡಿ ರವರು ಆಟಿದ ಮದಿಪು ನೀಡಿದರು
ಪ್ರಧಾನ ಕಾರ್ಯದರ್ಶಿ ನಾಗರತ್ನ ಸ್ವಾಗತಿಸಿದರು ಶಾಂಭವಿ ಧನ್ಯವಾದ ಅರ್ಪಿಸಿದರು, ಗಿರೀಶ್ ದೇವಾಡಿಗ ತನುಜಾ ನಿರೂಪಿಸಿದರು
ಬಳಿಕ ಸಂಘದ ಸದಸ್ಯರಿಂದ " ಸಿರಿಭಗವತಿ " ಕಥಾಪ್ರಸಂಗ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿ ಸಾಧಕರಿಗೆ ಪ್ರತಿಭಾ ಪುರಸ್ಕಾರ , ಸಾಧಕರಿಗೆ ಸನ್ಮಾನ ಮತ್ತು ಸಾಂಪ್ರದಾಯಿಕ ಆಟಿಯ ತಿಂಡಿ ತಿನಿಸಿನ ವ್ಯವಸ್ಥೆ ಮಾಡಲಾಗಿತ್ತು