ಸಜ್ಜನ ಬಂಧುಗಳು ಕಿನ್ನಿಗೋಳಿ ವತಿಯಿಂದ ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಆಟಿ ಅಮವಾಸ್ಯೆಯ ಉಚಿತ ಕಷಾಯ ವಿತರಣೆ
ಕಿನ್ನಿಗೋಳಿ:ಆಟಿಯ ಅಮವಾಸ್ಯೆ ಯಂದು ಕುಡಿಯುವ ಕಷಾಯ ಅದೊಂದು ಮೂಡನಂಬಿಕೆಯಲ್ಲ ಅದು ಹಿರಿಯರ ಮೂಲನಂಬಿಕೆ ಎಂದು ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ಹೇಳಿದರು. ಅವರು ಕಿನ್ನಿಗೋಳಿ ಬಸ್ಸುನಿಲ್ದಾಣದಲ್ಲಿ ಸಜ್ಜನ ಬಂಧುಗಳು ಕಿನ್ನಿಗೋಳಿ ವತಿಯಿಂದ ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಆಟಿ ಅಮವಾಸ್ಯೆಯ (ಪಾಲೆದ ಕೆತ್ತೆದ ಕಷಾಯ)ಉಚಿತ ಕಷಾಯ ವಿತರಿಸಿ ಮಾತನಾಡಿದರು.ಈ ಸಂದರ್ಭಕಿನ್ನಿಗೋಳಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಜೆ.ಬಿ.ಪ್ರೆಂಡ್ಸ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಜ್ಜನ ಬಂಧುಗಳು ಸಂಸ್ಥೆಯ ಅಧ್ಯಕ್ಷ ರಘುನಾಥ್ ಕಾಮತ್ ಕೆಂಚನಕೆರೆ, ಸದಸ್ಯರಾದ ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ಪ್ರಣಿಕ್ ಕಿನ್ನಿಗೋಳಿ, ದಾಮೋದರ್ ಶೆಟ್ಟಿ, ಜಯಂತ್ ಸುವರ್ಣ, ದೇವದಾಸ್ ಮಲ್ಯ, ಮಿಥುನ್ ಉಡುಪ, ನಿಶಾಂತ್ ಕಿಲೆಂಜೂರು, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.