Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...




ರೋಟರಿ ಆಂಗ್ಲ ಮಾಧ್ಯಮ ಶಾಲೆ, ಕಿನ್ನಿಗೋಳಿಯಲ್ಲಿ ಸದ್ಭಾವನಾ ದಿನಾಚರಣೆ



ಕಿನ್ನಿಗೋಳಿ: ರೋಟರಿ ಆಂಗ್ಲ ಮಾಧ್ಯಮ ಶಾಲೆ, ಕಿನ್ನಿಗೋಳಿಯಲ್ಲಿ  ಆ.20 ರಂದು  ಸದ್ಭಾವನಾ ದಿನವನ್ನು ಆಚರಿಸಲಾಯಿತು.  9ನೇ ತರಗತಿಯ ವಿದ್ಯಾರ್ಥಿನಿ ಅನನ್ಯ ಅವರು ಸದ್ಭಾವನಾ ದಿನದ ಮಹತ್ವವನ್ನು ವಿವರಿಸಿದರು.

10ನೇ ತರಗತಿಯ ವಿದ್ಯಾರ್ಥಿ ಅಮೋಘ ಅವರು ಪ್ರಮಾಣವಚನವನ್ನು ಬೋಧಿಸಿದರು. ವಿದ್ಯಾರ್ಥಿಗಳು ಅವರೊಂದಿಗೆ ಪ್ರಮಾಣವಚನವನ್ನು ಪುನರುಚ್ಚರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ  ಸುನಿತಾ ಗುರುರಾಜ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವು ಸದ್ಭಾವನೆ, ಏಕತೆ ಮತ್ತು ಸಹೋದರತ್ವದ ಮಹತ್ವವನ್ನು ಸಾರಿತು.