Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಆ.30:ಕಿನ್ನಿಗೋಳಿಯಲ್ಲಿ ಬಿಲ್ವನೃತ್ಯಾರ್ಪಣಂ

ಕಿನ್ನಿಗೋಳಿ : ಬಿಲ್ವ ಕಲಾಶಾಲೆ ಪ್ರಸ್ತುತ ಪಡಿಸುವ ಬಿಲ್ವ ನೃತ್ಯಾರ್ಪಣಂ ಕಾರ್ಯಕ್ರಮ ಕಿನ್ನಿಗೋಳಿಯ ರಾಮಮಂದಿರದಲ್ಲಿ ಆ. 30 ರ ಭಾನುವಾರ ಸಂಜೆ ಗಂಟೆ 5 ರಿಂದ ನಡೆಯಲಿದೆ ಎಂದು ಸಂಸ್ಥೆಯ ವಿದುಷಿ ಶ್ರೀಮತಿ ರಶ್ಮಿ ಉಡುಪ ತಿಳಿಸಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಖ್ಯಾತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್, ಕಟೀಲು ದೇಗುಲದ ವಾಸುದೇವ ಆಸ್ರಣ್ಣ, ನೃತ್ಯಾಂಜಲಿಯ ವಿದ್ವಾನ್ ಚಂದ್ರಶೇಖರ ನಾವಡ, ವಿದುಷಿ ಶ್ರೀಮತಿ ರಾಜಶ್ರೀ ಉಳ್ಳಾಲ, ಕರ್ನಾಟಕ ಬ್ಯಾಂಕಿನ ಡಿಜಿಎಂ ವಸಂತ ಹೇರ್ಳೆ ಭಾಗವಹಿಸಲಿದ್ದಾರೆ.
ಆಶ್ವೀಜಾ ಉಡುಪರಿಂದ ಶಾಸ್ತ್ರೀಯ ಸಂಗೀತ, ಚ್ಯವನ ಇವರಿಂದ ವೇಣುವಾದನ ಹಾಗೂ ಬಿಲ್ವ ಕಲಾಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.