ಕಿನ್ನಿಗೋಳಿ:ಭ್ರಾಮರೀ ಮಹಿಳಾ ಸಮಾಜ (ರಿ,) ಮೆನ್ನಬೆಟ್ಟು ಕಿನ್ನಿಗೋಳಿ ಇವರ 19 ನೇ ವರ್ಷದ ವಾರ್ಷಿಕೋತ್ಸವ ಹಾಗು ಆಟಿಡ್ ಪಡ್ಸಲೆದ ಪೊರ್ಲು ಕಾರ್ಯಕ್ರಮ
ಕಿನ್ನಿಗೋಳಿ:ಭ್ರಾಮರೀ ಮಹಿಳಾ ಸಮಾಜ (ರಿ,) ಮೆನ್ನಬೆಟ್ಟು ಕಿನ್ನಿಗೋಳಿ ಇವರ 19 ನೇ ವರ್ಷದ ವಾರ್ಷಿಕೋತ್ಸವ ಹಾಗು ಆಟಿಡ್ ಪಡ್ಸಲೆದ ಪೊರ್ಲು ಕಾರ್ಯಕ್ರಮ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು.ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಭ್ರಾಮರೀ ಮಹಿಳಾ ಸಮಾಜ (ರಿ,) ಮೆನ್ನಬೆಟ್ಟು ಇದರ ಗೌರವಾಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಥಮ ದರ್ಜೆ ಕಾಲೇಜಿನ ಮಾಜಿ ಪ್ರಾಧ್ಯಾಪಕಿ ಶ್ರೀಮತಿ ಆಶಾಲತಾ ಶೆಟ್ಟಿ ಆಟಿದ ಪೊಲಬು ಇದರ ಬಗ್ಗೆ ಮಾಹಿತಿ ನೀಡಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರಾದ ದಾಮೋದರ ಶೆಟ್ಟಿ, ಶ್ರೀಮತಿ ಕೋಕಿಲಾ, ಪ್ರಕಾಶ್ ಆಚಾರ್ಯ, ಆದರ್ಶ ಬಳಗ (ರಿ,) ಕೊಡೆತ್ತೂರು ಇದರ ಅಧ್ಯಕ್ಷ ಯುವರಾಜ ಶೆಟ್ಟಿ, ಸಾರ್ವಜನಿಕ ಶ್ರೀ ಬಾಲಗಣೇಶೋತ್ಸವ ಸಮಿತಿ (ರಿ,) ರಾಜರತ್ನಪುರ ಇದರ ಅಧ್ಯಕ್ಷ ಸತೀಶ್ ಪೂಜಾರಿ, ಅಧ್ಯಕ್ಷೆ ಮೀರಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಅಭಿನಂದನೆ, ಹಾಗೂ ಹಿರಿಯರಿಗೆ ಸನ್ಮಾನ ನಡೆಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ದಿಯಾ ಆಳ್ವ ಮೂಡುಬಿದಿರೆ, ಸ್ವಾತಿ ಕಿನ್ನಿಗೋಳಿ ಇವರನ್ನು ಗೌರವಿಸಲಾಯಿತು, ಅಮಿತ, ಅನುಷಾ ಕರ್ಕೇರ ಸನ್ಮಾನಿತರ ಪತ್ರ ವಾಚಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸಮಾಜದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಂಧ್ಯಾ ರಾಜರಾಮ್ ವರದಿ ವಾಚಿಸಿದರು, ಶ್ರೀಮತಿ ರೇವತಿ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಮೀರಾ ಸ್ವಾಗತಿಸಿ ವಂದಿಸಿದರು.