ಶಾಮಿಯಾನ ಸಂಯೋಜಕರ ಸೇವಾ ಟ್ರಸ್ಟ್ ಮೂಲ್ಕಿ ಕಿನ್ನಿಗೋಳಿ (ರಿ ) ಇದರ 18ನೇ ವಾರ್ಷಿಕೋತ್ಸವ
ಕಿನ್ನಿಗೋಳಿ:ಶಾಮಿಯಾನ ಸಂಯೋಜಕರ ಸೇವಾ ಟ್ರಸ್ಟ್ ಮೂಲ್ಕಿ ಕಿನ್ನಿಗೋಳಿ (ರಿ )400-190 ಇದರ 18ನೇ ವಾರ್ಷಿಕೋತ್ಸವ ಎಸ್. ಕೊಡಿ ಕುಲಾಲ ಭವನದಲ್ಲಿ ನಡೆಯಿತು.ಸತೀಶ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ ಸುಧಾಕರ್ ಸಾಲಿಯಾನ್, ಎಂ.ಕೆ ಶಾಫಿ,ಗೋಪಾಲಕೃಷ್ಣ , ನವೀನ್ ಪಕ್ಷಿಕೆರೆ, ಸುರೇಶ್ ಕೆ ಸುವರ್ಣ , ಬಾಲಕೃಷ್ಣ ಅಮೀನ್, ಸದಾಶಿವ ಶೆಟ್ಟಿಗಾರ್, ಜಗನಾಥ್ ನಾಯ್ಕ್ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಈ ವೇಳೆ ಜೈಕೃಷ್ಣ ಕೋಟ್ಯಾನ್ ಹಾಗೂ ಸುಧಾಕರ್ ಸಾಲಿಯಾನ್ ರವರನ್ನು ಸನ್ಮಾನಿಸಲಾಯಿತು.