Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಿಷಪೂರಿತ ಹಾವು ಕಚ್ಚಿ ವ್ಯಕ್ತಿ ಸಾವು

ಕೈಕಂಬ : ವಿಷಪೂರಿತ ಹಾವು ಕಚ್ಚಿ ವ್ಯಕ್ತಿಯೊರ್ವ ಮೃತ ಪಟ್ಟ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಮಠ ಸಮೀಪದ ಓಡ್ಡೂರು ಎಂಬಲ್ಲಿ ಸೋಮವಾರ ನಡೆದಿದೆ.
ಓಡ್ಡೂರು ನಿವಾಸಿ ಭಾಸ್ಕರ್ ಅವರ ಪುತ್ರ ಹರೀಶ್(35)ಮೃತಪಟ್ಟ ದುರ್ದೈವಿ.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಹರೀಶ್  ಅವರಿಗೆ ಸೋಮವಾರ ಸಂಜೆ ವೇಳೆ ಹಾವು ಕಚ್ಚಿದ್ದು, ಈ ಬಗ್ಗೆ ನಿರ್ಲಕ್ಷ ತೋರಿದ್ದರು ಎನ್ನಲಾಗಿದೆ. ಪರಿಣಾಮವಾಗಿ ವಿಷ ದೇಹವೆಲ್ಲ ಹರಡಿ ಸಾವು ಉಂಟಾಗಿದೆ ಎನ್ನಲಾಗಿದೆ. ವೈದ್ಯರಲ್ಲಿಗೆ ತೆರಳುವಾಗ ಸಮಯ ಮೀರಿತ್ತು ಎನ್ನಲಾಗಿದೆ.