ಕಾಟಿಪಳ್ಳ ಲಯನ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕಾಟಿಪಳ್ಳ: ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸುವ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರೋತ್ಸವನ್ನು ದೇಶದೆಲ್ಲೆಡೆ ಆಚರಿಸುವ ಸಂದರ್ಬದಲ್ಲಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳು, ಜನರಲ್ಲಿ ಏಕತೆ ಮತ್ತು ಸಮಾನತೆಯನ್ನು ಕಾಪಾಡಿಕೊಂಡು ಬರಲು ಶ್ರಮಿಸಬೇಕು ಎಂದು ಕಾಟಿಪಳ್ಳ - ಕೃಷ್ಣಾಪುರ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪಿ. ದಯಕರ ಸುವರ್ಣ ಹೇಳಿದರು.
ಅವರು ಕಾಟಿಪಳ್ಳ ಕೈಕಂಬದ ಲಲಿತಾ ಟವರ್ ಬಳಿ, ಲಯನ್ಸ್ ಕ್ಲಬ್ ಕಾಟಿಪಳ್ಳ - ಕೃಷ್ಣಾಪುರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಾಳ ಶಾಖೆ ಇದರ ಜಂಟಿ ಆಶ್ರಯದಲ್ಲಿ ನಡೆದ 80 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಗಳ ವಲಯ ಅಧ್ಯಕ್ಷ ದೀಪಕ್ ಪೆರ್ಮುದೆ, ಕಾಟಿಪಳ್ಳ - ಕೃಷ್ಣಾಪುರ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಶಿವಪ್ರಸಾದ್ ಬಾಳ, ವಿಶ್ವನಾಥ್ ಭಂಡಾರಿ, ಲೋಕೇಶ್ ಕುರುವನ, ಉಪಾಧ್ಯಕ್ಷ ಪುಷ್ಪರಾಜ್ ಅಡಪ, ಸದಸ್ಯರುಗಳಾದ ವಿಶ್ವನಾಥ್ ಶೆಟ್ಟಿ, ಆನಂದ ಅಮೀನ್, ದೀಪಕ್ ಎಸ್.ಪೂಜಾರಿ, ಪ್ರಶಾಂತ್ ಪಿ.ಶೆಟ್ಟಿ, ಕಿಶೋರ್ ಶೆಟ್ಟಿ, ಸ್ಥಳೀಯರಾದ ಶುಕ್ರು ಸಾಹೇಬ್, ವಿಠಲ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಕ್ಲಬ್ ನ ಕೋಶಾಧಿಕಾರಿ ವಿನೋದ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಶೆಟ್ಟಿ ವಂದನಾರ್ಪಣೆಗೈದರು. ಲಯನ್ಸ್ ಪ್ರಾಂತೀಯ ರಾಯಭಾರಿ ಮಾಧವ ಎಸ್.ಶೆಟ್ಟಿ ನಿರೂಪಿಸಿದರು.
ಅಂತರ್ ರಾಜ್ಯದ ಸುಮಾರು 80 ಗುತ್ತಿಗೆ ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಷ್ಟ್ರಪ್ರೇಮ ಮೆರೆದರು.