ಕಟೀಲಿನಲ್ಲಿ ರಂಗಗೀತೆ ಕಾರ್ಯಾಗಾರಏಕಾಂತದ ಅನುಭವ ನೀಡುವ ಸಾಹಿತ್ಯ ಸಂಗೀತ - ಶ್ರೀಹರಿ ಅಸ್ರಣ್ಣ
ಕಟೀಲು : ಭಾರತೀಯ ನಾಟಕಗಳಲ್ಲಿ ಸಂಗೀತಕ್ಕೆ ಹೆಚ್ಚು ಮಹತ್ವ ಇದೆ. ಸಂಸ್ಕೃತ ನಾಟಕಗಳು ಸಂಗೀತ ಪ್ರಧಾನವೇ ಆಗಿರುತ್ತಿದ್ದವು. ಹಾಡು ಹಿಟ್ ಆದರೆ ಸಿನಿಮಾ ಕೂಡ ಗೆದ್ದಂತೆ. ಇಂತಹ ಸಂಗೀತ ಸಾಹಿತ್ಯ ಕಲಾಪ್ರಕಾರಗಳು ಸಂತೆಯಲ್ಲೂ ಏಕಾಂತದ ಅನುಭವ ನೀಡಬಲ್ಲವು. ಭಾರತೀಯ ಸಂಗೀತದ ಅನುಭೂತಿಯನ್ನು ಎಲ್ಲರಿಗೂ ಆಗಲಿ. ಇದಕ್ಕಾಗಿ ರಂಗಭೂಮಿ ಯಕ್ಷಗಾನ ಕಲೆಗಳಲ್ಲಿ ಆಸಕ್ತಿ ತಾಳಬೇಕು ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಕಟೀಲು ದೇಗುಲದ ಪದವಿಪೂರ್ವ ಕಾಲೇಜಿನಲ್ಲಿ ಮೂಲ್ಕಿ ತಾಲೂಕಿನ ಆಸಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ ರಂಗಗೀತೆಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
ಜರ್ನಿ ಥೇಟರ್ ಗ್ರೂಪಿನ ಚಿನ್ಮಯಿ ಮಾತನಾಡಿ ಒಳ್ಳೆಯ ಪ್ರೇಕ್ಷಕರಾಗಲು ಕಲಿಯಬೇಕು. ಆಗ ನಾಟಕ ಯಕ್ಷಗಾನ ನೃತ್ಯ ಸಂಗೀತ ಯಾವುದೇ ಕಲೆಗಳನ್ನು ಅನುಭವಿಸಲು ಸಾಧ್ಯ ಎಂದರು.
ಸಮಾರೋಪದಲ್ಲಿ ಸಮಾರಂಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಶಿಬಿರಾರ್ಥಿಗಳು ಅನುಭವ ಹೇಳಿದರು
ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ನ ಕಲಾವಿದರು ಗಜವದನ ಹೇ ರಂಭ, ತೆಪ್ಪ ಹತ್ತಿ ಸಣ್ಣ ತೆಪ್ಪ ಹತ್ತಿ, ಡೊಂಕು ಬಾಲದ ನಾಯಕರೇ, ಗೋವಿಂದ ಮುರಹರಿ ಗೋವಿಂದ ಮೊದಲಾದ ರಂಗಗೀತೆಗಳನ್ನು ಕಲಿಸಿದರು.
ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಕಡಂದಲೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದಿನಕರ ಕುಂಭಾಶಿ ಮತ್ತಿತರರಿದ್ದರು.
ಉಪನ್ಯಾಸಕಿ ಶೈಲಜಾ ನಿರೂಪಿಸಿದರು. ಶ್ರೀವಿದ್ಯಾ ವಂದಿಸಿದರು.