ಕಟೀಲು ಪದವಿ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಕಟೀಲು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲು ಇದರ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಘಟಕ ಹಾಗೂ ರೆಡ್ ರಿಬ್ಬನ್ ಘಟಕಗಳ ಸಹಯೋಗದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮಂಗಳೂರು ಶಾಖೆಯ ರಕ್ತನಿಧಿಯ ಸಹಕಾರದೊಂದಿಗೆ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ದೇವಸ್ಥಾನದ ಅನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ ಶಿಬಿರ ಉದ್ಘಾಟಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮಂಗಳೂರು ಶಾಖೆಯ ರಕ್ತನಿಧಿಯ ವೈದ್ಯಾಧಿಕಾರಿ ಡಾ. ಸುಕೇಶ್, ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ. ನಾಗರಾಜ್, ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಅಶ್ವತ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ಅಶ್ವಿತಾ ವಿ. ಶೆಟ್ಟಿ, ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷೆ ಮೇಘನಾ, ಉಪಾಧ್ಯಕ್ಷೆ ಪ್ರೀತಿ, ಕಾರ್ಯದರ್ಶಿ ಶ್ರಾವ್ಯ ಮಲ್ಯ, ಜಂಟಿ ಕಾರ್ಯದರ್ಶಿ ಶಮಿತಾ, ಯುವ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ದುರ್ಗಾಪ್ರಸಾದ್, ಜಂಟಿ ಕಾರ್ಯದರ್ಶಿ ಶ್ರಾವ್ಯ, ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಕಾರ್ಯದರ್ಶಿ ಅಜಿತ್, ಜಂಟಿ ಕಾರ್ಯದರ್ಶಿ ರಕ್ಷಿತಾ, ರೆಡ್ ರಿಬ್ಬನ್ ಘಟಕದ ಕಾರ್ಯದರ್ಶಿ ಪುನೀತ್ ಹಾಗೂ ಜಂಟಿ ಕಾರ್ಯದರ್ಶಿ ಪಲ್ಲವಿ ಉಪಸ್ಥಿತರಿದ್ದರು. ಸ್ವಾತಿ ಸ್ವಾಗತಿಸಿದರು. ಶ್ರೇಯಶ್ರೀ ವಂದನಾರ್ಪಣೆ ಮಾಡಿದರು. ಭುವನ್ ನಿರೂಪಿಸಿದರು.
ಒಟ್ಟು ೩೬ ಯೂನಿಟ್‌ಗಳಷ್ಟು ರಕ್ತ ಸಂಗ್ರಹಿಸಲಾಯಿತು.