ಕಟೀಲು ಕ್ಷೇತ್ರ ಹಾಗೂ ಯಕ್ಷಗಾನದ ಬಗ್ಗೆ ಅವ್ಯವಸ್ಥಿತ ಅಪಪ್ರಚಾರ,ವಿ.ಹಿಂ.ಪ ನಿಂದ ಸಾಮೂಹಿಕ ಪ್ರಾರ್ಥನೆ
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಪುಣ್ಯ ಕ್ಷೇತ್ರದ ಪವಿತ್ರ ಯಕ್ಷಗಾನದ ವಿರುದ್ದ ಇತ್ತೀಚಿಗೆ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರಗಳನ್ನು ತೀವ್ರವಾಗಿ ಖಂಡಿಸಿ ವಿಶ್ವ ಹಿಂದೂ ಪರಿಷತ್ ನ ದ.ಕ ಜಿಲ್ಲಾ ವತಿಯಿಂದ ಮಂಗಳವಾರದಂದು ಕಟೀಲು ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆಯು ನಡೆಯಿತು.
ಈ ಸಂದರ್ಭ ಕಟೀಲು ದೇವಳದ ಅನುವಂಶಿಕ ಅರ್ಚಕರಾದ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ,ಹರಿನಾರಾಯಣ ದಾಸ ಆಸ್ರಣ್ಣ,ಕಮಲಾದೇವಿ ಪ್ರಸಾದ ಆಸ್ರಣ್ಣ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಗಿರಿ ಪ್ರಕಾಶ್ ತಂತ್ರಿ ಪೊಳಲಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ ಪುರುಷೋತ್ತಮ,ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್ ,ಕಾರ್ಯಾಧ್ಯಕ್ಷ ಗೋಪಾಲ್ ಕುತ್ತಾರ್,ನಗರ ಕಾರ್ಯಾಧ್ಯಕ್ಷ ಮನೋಹರ್ ಸುವರ್ಣ,ಸಹ ಸಂಯೋಜಕ ನವೀನ್ ಮೂಡುಶೆಡ್ಡೆ,ಜಿಲ್ಲಾ ಸಂಯೋಜಕ ಪ್ರೀತಮ್ ಶೆಟ್ಟಿ,ಪ್ರಾಂತ ಸಂಯೋಜಕ ಭುಜಂಗ ಕುಲಾಲ್ ,ಸಹಕಾರ್ಯದರ್ಶಿ ದಿನೇಶ್ ಮಿಜಾರ್,ಪ್ರಮುಖರಾದ
ಕಿಶೋರ್ ಶೆಟ್ಟಿ ಕೊಡೆತ್ತೂರುಗುತ್ತು, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು,ಗುರುರಾಜ್ ಮಲ್ಲಿಗೆಯಂಗಡಿ,
ಈಶ್ವರ್ ಕಟೀಲ್ ,ಲೋಕಯ್ಯ ಸಾಲ್ಯಾನ್ ಕಟೀಲ್ ,ಕಸ್ತೂರಿಪಂಜ,ಸುದರ್ಶನ್ ಮೂಡಬಿದಿರೆ,ಭುವನಾಭಿರಾಮ ಉಡುಪ, ಧನಂಜಯ ಶೆಟ್ಟಿಗಾರ್, ಕೇಶವ ಕರ್ಕೇರಾ,ಅಭಿಲಾಷ್ ಶೆಟ್ಟಿ ಕಟೀಲು ಹಾಗೂ ಮೊದಲಾದವರು ಇದ್ದರು.