ಕಟೀಲು ದೇಗುಲದಲ್ಲಿ ನಾಗರಪಂಚಮಿ
ಕಟೀಲು ದೇಗುಲದಲ್ಲಿ ನಾಗರಪಂಚಮಿ ಪ್ರಯುಕ್ತ ನೂರಾರು ಮಂದಿ ಹಾಲೆರೆಯಲು ಬಂದಿದ್ದರು. ಕಟೀಲಿನಲ್ಲಿ ನಾಗಾರಾಧನೆಯೂ ವಿಶೇಷವಾಗಿದ್ದು, ದೇಗುಲದ ಮೂರು ನಾಗಸನ್ನಿಧಿಗಳಲ್ಲಿ ಆರಾಧನೆ ನಡೆಯಿತು. ದೇಗುಲದ ಒಳಗೆ ನಾಗನ ಗುಡಿ, ಹೊರಗಿನ ನಾಗನ ಗುಡಿ ಹಾಗೂ ಕುದುರುವಿನಲ್ಲಿರುವ ನಾಗನಗುಡಿಗಳಲ್ಲಿ ಪೂಜೆ ನಡೆಯಿತು. ಕಟೀಲು ದುರ್ಗೆಯ ದಿನನಿತ್ಯದ ಅಲಂಕಾರದಲ್ಲಿ ವಿಗ್ರಹದ ಮೇಲ್ಬಾಗದಲ್ಲಿ ನಾಗಚಿಹ್ನೆಯೂ ಸೇರಿರುತ್ತದೆ ಎಂಬುದು ಗಮನೀಯ.