ಕಟೀಲು ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ
ಕಟೀಲು :ಕಟೀಲು: ದಿ. ಗೋಪಾಲಕೃಷ್ಣ ಆಸ್ರಣ್ಣರು ಪವಾಡ ಪುರುಷ ಹಾಗೂ ಶೇಷ್ಠ ಸಂತರಾಗಿದ್ದರು. ಕಟೀಲು ಕ್ಷೇತ್ರ ಬೆಳಗಲು ದಿ.ಗೋಪಾಲಕೃಷ್ಣ ಆಸ್ರಣ್ಣರು ಕಾರಣಕರ್ತರಾಗಿದ್ದಾರೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಶನಿವಾರದಂದು ಸಂಜೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆದ ಕಟೀಲು ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರನ್ನು
ಜಾತಿ ಮತ ಭೇದ ಮಾಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದರು
ಕಾರ್ಯಕ್ರಮದಲ್ಲಿ ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಾತನಾಡಿದರು
ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಮಾಡಿದರು.
ಮಂಗಳೂರು ಶಕ್ತಿ ನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಡಾ| ಕೆ. ಸಿ. ನಾಯ್‌್ಕ ರವರಿಗೆ ಗೋಪಾಲಕೃಷ್ನ ಆಸ್ರಣ್ಣ ಮೊಕ್ತೇಸರ ಪ್ರಶಸ್ತಿ , ಅತ್ತೂರು ಬೈಲು ವೆಂಕಟರಾಜ ಉಡುಪರಿಗೆ ಅರ್ಚಕ ಪ್ರಶಸ್ತಿ , ವೇ.ಮೂ. ಸಗ್ರಿ ಗೋಪಾಲಕೃಷ್ಣ ಸಾಮಗ, ಎಂ ಲಕ್ಷ್ಮೀನಾರಾಯಣ ಭಟ್ ರವರಿಗೆ ಗೋಪಾಲಕೃಷ್ನ ಆಸ್ರಣ್ಣ ಪ್ರಶಸ್ತಿ,ಹಿಮ್ಮೇಳ ವಾದಕ ಮೋಹನ್ ಶೆಟ್ಟಿಗಾರ್ ಮಿಜಾರು ರವರಿಗೆ ಕದ್ರಿ ಅಸ್ರಣ್ಣ ಅಭಿಮಾನಿ ಬಳಗ ಕೊಡಮಾಡುವ ಆಸ್ರಣ್ಣ ಪ್ರಶಸ್ತಿ ಹಾಗೂ ಪು.ಶ್ರೀನಿವಾಸ ಭಟ್ ನೆನಪಿಗೆ ಆಸ್ರಣ್ಣ ಪ್ರಶಸ್ತಿಯನ್ನು ರವಿಶಂಕರ ವಳಕುಂಜ ,ಮತ್ತು ಪುಚ್ಚಕರೆ ಕೃಷ್ಣ ಭಟ್ ನೆನಪಿನ ಆಸ್ರಣ್ಣ ಪ್ರಶಸ್ತಿಯನ್ನು ಅಮ್ಮಂಜೆ ಮೋಹನ್ ಕುಮಾರ್ ರಿಗೆ ನೀಡಿ ಸನ್ಮಾನಿಸಲಾಯಿತು, ಬಾಲಪ್ರತಿಭೆ ಪ್ರಗ್ಯಾ ಬಜಪೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು
ವೇದಿಕೆಯಲ್ಲಿ ಮಾಜೀ ಸಚಿವ ನಾಗರಾಜ ಶೆಟ್ಟಿ,ಉದ್ಯಮಿಗಳಾದ ರಾಮದಾಸ ಮಡ್ಮಣ್ಣಾಯ ಪುತ್ತಿಗೆ ಬೆಂಗಳೂರು, ರಾಜೇಶ್ ಶೆಟ್ಟಿ, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ,
ಅಗರಿ ರಾಘವೇಂದ್ರ ರಾವ್
ಉದ್ಯಮಿ ಚಂದ್ರಹಾಸ ರೈ, ಮುಂಬೈ, ಕಟೀಲು ಕ್ಷೇತ್ರದ
ಆಡಳಿತ ಮೊಕ್ತಸರ ಸನತ್‌ಕುಮಾರ್ ಶೆಟ್ಟಿ, ಕಸಾಪ ಮಾಜೀ ರಾಜ್ಯಾಧ್ಯಕ್ಷ
ಡಾ| ಹರಿಕೃಷ್ಣ ಪುನರೂರು,,
ಕಲ್ಕೂರ ಪ್ರತಿಷ್ಠಾನದ
ಪ್ರದೀಪ ಕುಮಾರ್ ಕಲ್ಕೂರ, ಉದ್ಯಮಿ
ಶ್ರೀಪತಿ ಭಟ್ ಮೂಡುಬಿದಿರೆ,ಕಿನ್ನಿಗೋಳಿ ಯುಗಪುರುಷ ಸಂಪಾದಕ
. ಕೆ. ಭುವನಾಭಿರಾಮ ಉಡುಪ,ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಸದಸ್ಯ ಲೋಕಯ್ಯ ಸಾಲ್ಯಾನ್ ಕೊಂಡೇಲ,ಕದ್ರಿ ನವನೀತ ಶೆಟ್ಟಿ, ಬಿಪಿನ್ ಪ್ರಸಾದ್ ಕೊಡೆತ್ತೂರುಗುತ್ತು,ಮೋಹನ್ ಮೆಂಡನ್ ,ಸುಧಾಕರ ಪೇಜಾವರ, ಉದ್ಯಮಿ ರವೀಂದ್ರ ಶೇಟ್, ಸಿ ಎ ದಿವಾಕರ ರಾವ್,ಚಂದ್ರಶೇಖರ ರಾವ್, ದೊಡ್ಡಯ್ಯ ಮೂಲ್ಯ
ಗೋಪಾಲಕೃಷ್ಣ ಆಸ್ರಣ್ಣ, ಪು.ಗುರುಪ್ರಸಾದ ಭಟ್, ಅಶ್ವತ್ ರಾವ್ ಮತ್ತಿತರರು ಉಪಸ್ಥಿತರಿದ್ದರು .ಸಂಘಟಕ ವೆ. ಮೂ. ಲಕ್ಷ್ಮೇನಾರಾಯಣ ಆಸ್ರಣ್ಣ ಸ್ವಾಗತಿಸಿದರು, ಡಾ. ರಮ್ಯಾ ರವಿತೇಜ ನಿರೂಪಿಸಿದರು ಬಳಿಕ ಯಕ್ಷಗಾನ ಗಾನ ವೈಭವ ನಡೆಯಿತು.