Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಆ.8:ಕಟೀಲಿನಲ್ಲಿ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ, ಯಕ್ಷಗಾನ


ಕಟೀಲು : ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ  ಮುಂಬೈ ಯುಎಇ ವತಿಯಿಂದ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಆಗಸ್ಟ್ 8 ರ ಶನಿವಾರ ಮಧ್ಯಾಹ್ನ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಲಿದೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಮೋಹನ ಆಳ್ವ, ಯು.ಟಿ. ಖಾದರ್, ಐವನ್ ಡಿಸೋಜ, ನಳಿನ್ ಕುಮಾರ್, ಉಮಾನಾಥ ಕೋಟ್ಯಾನ್, ಐಕಳ ಹರೀಶ್ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ

ಪ್ರಶಸ್ತಿ ಪ್ರದಾನ:
ಹರೀಶ್ ಶೇರಿಗಾರ್ ಅವರಿಗೆ ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಮೋಹನ ಶೆಟ್ಟಿಗಾರರಿಗೆ ನೆಡ್ಲೆ ನರಸಿಂಹ ಭಟ್ ಪ್ರಶಸ್ತಿ, ನಾರಾಯಣ ಕುಲಾಲ್ ಅವರಿಗೆ ಕಲಾವಿದ ಸಂಮಾನ, ರವಿಶಂಕರ ವಳಕ್ಕುಂಜ ಅವರಿಗೆ ಅಗರಿ ಶ್ರೀನಿವಾರ ಭಾಗವತ ಸ್ಮೃತಿ ಪ್ರಶಸ್ತಿ, ಬೊಳ್ನಾಡುಗುತ್ತು ಚಂದ್ರಹಾಸ ರೈ ಅವರಿಗೆ ಕಲ್ಲಾಡಿ ವಿಠಲ ಶೆಟ್ಟಿ ಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಇದೇ ಸಂದರ್ಭ ಕಟೀಲು ಏಳೂ ಮೇಳಗಳ ಕಲಾವಿದರಿಂದ ಮಧ್ಯಾಹ್ನ ಗಂಟೆ 1ರಿಂದ ಯಕ್ಷಗಾನ ಬಯಲಾಟ ದೇವಸಂಕಲ್ಪ ನಡೆಯಲಿದೆ ಎಂದು ಸಂಘಟಕ ಪದ್ಮನಾಭ ಕಟೀಲು ತಿಳಿಸಿದ್ದಾರೆ.