ಕಟೀಲು ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ
ಕಟೀಲು : ಕಲಿಸಿದ ಗುರುವನ್ನು ಯಾವತ್ತಿಗೂ ಮರೆಯದೆ, ಅವರ ತ್ಯಾಗವನ್ನು ಗೌರವಿಸುವ ಮೂಲಕ ವಿದ್ಯಾರ್ಥಿಗಳು ಶ್ರೇಯಸ್ಸನ್ನು ಪಡೆಯಬೇಕು. ಶ್ರಮ ಯಾವತ್ತಿಗೂ ಮುಖ್ಯ. ಅದು ಕಲಿಕೆಯಲ್ಲಿ, ಉದ್ಯೋಗದಲ್ಲಿ ಹೀಗೆ ಎಲ್ಲ ವಿಚಾರಗಳಲ್ಲೂ ಶ್ರಮ ಸಾಧನೆಯೆಡೆಗೆ ಕೊಂಡೊಯ್ಯತ್ತದೆ. ಸ್ವಚ್ಛ ಪರಿಸರಕ್ಕೆ ನಮ್ಮ ಮನಸ್ಸು ತುಡಿಯಬೇಕು. ಗ್ರಾಮೀಣಕ್ಷೇತ್ರವಾದರೂ, ಕಟೀಲಿನಂತಹ ಪುಣ್ಯ ಕ್ಷೇತ್ರದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸಾಧನೆಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವೇಕ್ ಆಳ್ವ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಮೂಹ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ನಾನು ತುಂಬ ಆರಾಧಿಸುವ ಕ್ಷೇತ್ರ ಕಟೀಲು. ಇಂತಹ ಕ್ಷೇತ್ರದ ಶಾಲೆಗಳಲ್ಲಿ ಕಲಿಯುತ್ತಿರುವ ಭಾಗ್ಯವಂತ ಮಕ್ಕಳು ಕ್ಷೇತ್ರಕ್ಕೂ ಕೀರ್ತಿ ತರಬೇಕು. ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ಉತ್ಸಾಹವನ್ನು ನಾನು ಯಾವತ್ತಿಗೂ ಗಮನಿಸುತ್ತಿರುತ್ತೇನೆ. ಈ ಉತ್ಸಾಹ ಸದಾ ಇರಲಿ ಎಂದು ವಿವೇಕ್ ಆಳ್ವ ಹೇಳಿದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ದೈಹಿಕ ಶಿಕ್ಷಣ ನಿವೃತ್ತ ಶಿಕ್ಷಕ ಸುಂದರ ಪೂಜಾರಿ ಅಭಿನಂದಿಸಿದರು.
ಪದವೀಪೂರ್ವ ಕಾಲೇಜಿನ ಪಠ್ಯಪೂರಕ ಸಂಘಗಳ ಚಟುವಟಿಕೆಗಳನ್ನು ಉದ್ಘಾಟಿಸಿದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಉತ್ತಮ ಕೊಡುಗೆ ನೀಡಲು ವಿದ್ಯಾರ್ಥಿಗಳು ಮುಂದಾಗಬೇಕೆಂದರು.
ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್‌ಕುಮಾರ ಶೆಟ್ಟಿ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಬಿಪಿನ್‌ಚಂದ್ರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಲೋಕಯ್ಯ ಸಾಲ್ಯಾನ್, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ದಯಾನಂದ ಮಾಡ, ಡಾ. ವಿಜಯ್ ವಿ., ಕುಸುಮಾವತಿ, ರಾಜಶೇಖರ್, ಗಿರೀಶ್ ತಂತ್ರಿ, ಚಂದ್ರಶೇಖರ ಭಟ್, ಸರೋಜಿನಿ ಉಪಸ್ಥಿತರಿದ್ದರು.
ಎಎಸ್‌ಎಲ್‌ಸಿ, ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ೬,೩೦,೫೦೦ ರೂಪಾಯಿಗಳನ್ನು ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕರಿಗೆ ವಿದ್ಯಾರ್ಥಿವೇತನವಾಗಿ ನೀಡಲಾಯಿತು. ದೇವರ ಶೇಷವಸ್ತ್ರ, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಉಪನ್ಯಾಸಕಿ ಶೈಲಜಾ ನಿರೂಪಿಸಿದರು. ಉಪಪ್ರಾಚಾರ‍್ಯ ರಾಜಶೇಖರ್ ಸ್ವಾಗತಿಸಿದರು. ಉಪನ್ಯಾಸಕಿ ಕವಿತಾ, ವಾದಿರಾಜ್, ಬಬಿತಾ, ಶ್ರುತಿ, ಅನಿಲ್, ಪರಮೇಶ್ವರ್, ತನುಜಾ, ಶ್ವೇತಾ ಶೆಟ್ಟಿ ಸಾಧಕರ ಪಟ್ಟಿ ವಾಚಿಸಿದರು.