Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜೀ ಕನ್ನಡ ವಾಹಿನಿಯ 'ಸರಿಗಮಪ ಲಿಟಲ್‌ ಚಾಂಪ್ಸ್‌ʼ 2026 ರ ವಿನ್ನರ್ ಅಶ್ಮಿತ್ ಎ.ಜೆ ಕಟೀಲು ದೇವಳಕ್ಕೆ ಭೇಟಿ

ಕಟೀಲು:ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರವಾಗುತ್ತಿದ್ದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ʻಸರಿಗಮಪ ಲಿಟಲ್‌ ಚಾಂಪ್ಸ್‌ʼ 2026 ರ  ಅಶ್ಮಿತ್ ಎ.ಜೆ  ಈ ಬಾರಿಯ ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್‌ ಆಗಿದ್ದು,ಶನಿವಾರದಂದು ಅಶ್ಮಿತ್ ಎ.ಜೆ ಅವರು  ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು.ಈ ಸಂದರ್ಭ ದೇವಸ್ಥಾನದ ವತಿಯಿಂದ ದೇವಳದ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಶ್ರೀದೇವಿಯ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಿ ಗೌರವಿಸಿದರು.ಈ ಸಂದರ್ಭ ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ತಿಮ್ಮಪ್ಪ ಕೋಟ್ಯಾನ್ ,ಲೋಕಯ್ಯ ಸಾಲ್ಯಾನ್ ,ದಾಮೋದರ ಶೆಟ್ಟಿ,ಅಶ್ಮಿತ್  ರ ತಂದೆ ಹಾಗೂ ತಾಯಿ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.