Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮಹಾಸಭೆ, ಸದಸ್ಯರಿಗೆ 9.5% ಡಿವಿಡೆಂಟ್

ಹಳೆಯಂಗಡಿ:ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಹಳೆಯಂಗಡಿಯ ಹರಿ ಓಂ ಸಭಾಭವನದಲ್ಲಿ ಶನಿವಾರ ನಡೆಯಿತು.  

ಸೊಸೈಟಿಯ ಅಧ್ಯಕ್ಷ  ಎಚ್ ವಸಂತ್ ಬೆರ್ನಾರ್ಡ್ ವಾರ್ಷಿಕ ಸಭೆಯಲ್ಲಿ  ಮಾತನಾಡಿ 2025- 26 ಸಾಲಿನಲ್ಲಿ ಸಂಘವು  484.78 ಕೋಟಿ ವಹಿವಾಟುಗಳನ್ನು ಮಾಡಿದ್ದು, 54.25 ಲಕ್ಷ ಲಾಭಾಂಶ ಗಳಿಸಿದೆ. ಪ್ರಸ್ತುತ 70 ಲಕ್ಷ  ಪಾಲು ಬಂಡವಾಳ,  3184 ಸದಸ್ಯರು, ಒಟ್ಟು44.93 ಕೋಟಿ ರೂಪಾಯಿಗಳು ಠೇವಣಿ ಇದ್ದು,37 ಕೋಟಿ ರೂಪಾಯಿಗಳು ಸಾಲ ನೀಡಲಾಗಿರುತ್ತದೆ.97.5% ಸಾಲ ವಸೂಲಾತಿ ಮಾಡಿದ್ದು ಈ ಬಾರಿಯೂ ಕೂಡ ಆಡಿಟ್ ವರ್ಗಿಕರಣದಲ್ಲಿ 'ಎ' ದರ್ಜೆಯ ಸ್ಥಾನಮಾನ ದೊರಕಿದೆ ಹಾಗೂ ಸದಸ್ಯರಿಗೆ 9.5 ಶೇಕಡ ಡಿವಿಡೆಂಟ್ ಅನ್ನು ಘೋಷಣೆ ಮಾಡಿದರು.


ಸಂಘದ ಸದಸ್ಯರು ಮೃತರಾದಲ್ಲಿ ಅವರ ಶವ ಸಂಸ್ಕಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಎಚ್ ನಾರಾಯಣ ಸನಿಲ್ ಮರಣೋತ್ತರ ನಿಧಿ ಸ್ಥಾಪಿಸಿ, ಪ್ರತಿ ಮರಣದ ಸಂದರ್ಭದಲ್ಲಿ ಹತ್ತು ಸಾವಿರ ನೀಡುವುದೆಂದು ಅಧ್ಯಕ್ಷರು ಘೋಷಿಸಿದರು. 

ಹಳೆಯಂಗಡಿ, ಪಡುಬಿದ್ರೆ, ಕಿನ್ನಿಗೋಳಿ, ಮೂಡಬಿದ್ರೆ  ಹೀಗೆ ನಾಲ್ಕು ಕಡೆಗಳಲ್ಲಿ ಶಾಖೆಯನ್ನು ಹೊಂದಿದ ಪ್ರಿಯದರ್ಶಿನಿ  ಸೊಸೈಟಿ ಈ ವರ್ಷ ಉಡುಪಿಯಲ್ಲಿ ಶಾಖೆಯನ್ನು  ತೆರೆಯಲು ತಯಾರು ನಡೆಸಿದೆ.  ಸೊಸೈಟಿ ಇಷ್ಟು ಸಾಧನೆ ಮಾಡಲು ನಿರ್ದೇಶಕರುಗಳ ಮಾರ್ಗದರ್ಶನ, ಗ್ರಾಹಕರ,ಸದಸ್ಯರ ಸಹಕಾರ ಮತ್ತು ಸಿಬ್ಬಂದಿಗಳ ಶ್ರಮ ಕಾರಣ ಎಂದರು.

ಈ ಸಂದರ್ಭ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ  ತರಗತಿಯಲ್ಲಿ ಉತ್ತಮ ಅಂಕಪಡೆದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಪ್ರಿಯದರ್ಶಿನಿ ಸ್ವಸಹಾಯ ಸಂಘಗಳಲ್ಲಿ ಉತ್ತಮ ಸಾಧನೆ ಮಾಡಿದ ಎರಡು ಸಂಘವನ್ನು ಗುರುತಿಸಿ ಹಾಗೂ ಪಿಎಚ್ ಡಿ ಪದವಿ ಪಡೆದ ಸೊಸೈಟಿ ನಿರ್ದೇಶಕ  ಡಾ. ಶೆರಿಲ್ ಅಯೊನಾ ಐಮನ್ ರವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ವಿಜಯ್ ಕುಮಾರ್ ಸನಿಲ್ , ನಿರ್ದೇಶಕ ಉಮಾನಾಥ್ ಜೆ ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್,  ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್ , ಡಾ. ಶೆರಿಲ್ ಅಯೋನ ಐಮನ್, ರೇಖಾ ಶೆಟ್ಟಿ, ಹರೀಶ್ ಎನ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನ್ ದಾಸ್, ಅನಿಲ್. ಪೂಜಾರಿ ಸಸಿಹಿತ್ಲು, ರಜೀಯಾ ಬಾನು, ಕರಿಯ ಕಾಡಿಗ ಉಪಸ್ಥಿತರಿದ್ದರು.

 ಪಡುಬಿದ್ರೆ ಶಾಖಾ ಸಿಬ್ಬಂದಿ ರಕ್ಷಿತ್  ಪ್ರಾರ್ಥಿಸಿದರು. ಕಿನ್ನಿಗೋಳಿ ಶಾಖಾ ಪ್ರಬಂಧಕಿ  ಅಕ್ಷತಾ ಶೆಟ್ಟಿ ರವರ ನಿರೂಪಿಸಿದರು. ಸಾಧಕರ ಅಭಿನಂದನಾ ಕಾರ್ಯಕ್ರಮವನ್ನು ಹಿರಿಯ ಶಾಖಾ ಪ್ರಬಂಧಕ  ಮೋಹನ್ ದಾಸ್ ,ವಿದ್ಯಾರ್ಥಿಗಳ ಗೌರವಾರ್ಪಣೆ ಕಾರ್ಯಕ್ರಮವನ್ನು ಮೂಡುಬಿದಿರೆ ಶಾಖಾ ಪ್ರಬಂಧಕಿ  ಅಭಿಷ್ಟಾ ಕುಮಾರಿ ,ಪಡುಬಿದ್ರೆ ಶಾಖಾ ಪ್ರಬಂಧಕಿ  ಅಂಜಲಿ ಉಳ್ಳಾಲ್ ಎಸ್, ಸ್ವಸಹಾಯ ಗುಂಪಿನ ಪದಾಧಿಕಾರಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ,ಹಳೆಯಂಗಡಿ ಶಾಖಾ ಪ್ರಬಂಧಕಿ  ಪ್ರಜ್ಞಾಶ್ರೀ ರವರು  ನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ  ಸ್ವಾಗತಿಸಿದರು. ಲೆಕ್ಕಗ  ಲೋಲಾಕ್ಷಿ ವಂದಿಸಿದರು.