ಹಳೆಯಂಗಡಿ: ಸಮಾಜದಲ್ಲಿ ಸಂಘಟನೆ ಮುಖ್ಯ-ಸತೀಶ್ ಭಟ್ ಕೊಳುವೈಲು
ಹಳೆಯಂಗಡಿ:ಸಮಾಜವನ್ನು ಸಂಘಟಿಸಿ ಅಭಿವೃದ್ಧಿ ಪಡಿಸುವ ಮೂಲಕ ಶಿಕ್ಷಣ ಆರೋಗ್ಯ ಕ್ರೀಡಾ ಕ್ಷೇತ್ರಗಳಲ್ಲಿ ಪಾವಂಜೆ ವಲಯವು ಉನ್ನತ ಸ್ಥಾನ ಗಳಿಸಿದೆ ಎಂದು ಶಿವಳ್ಳಿ ಸ್ಪಂದನ ವಲಯಾಧ್ಯಕ್ಷ ಸತೀಶ್ ಭಟ್ ಕೊಳುವೈಲು ಹೇಳಿದರು.
ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ
ಶಿವಳ್ಳಿ ಸಭಾ ಪಾವಂಜೆ ವಲಯದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಈ ಸಭೆಯಲ್ಲಿ ಶಿವಳ್ಳಿ ಸಭಾ ಕೇಂದ್ರ ವಲಯದ ಕಾರ್ಯದರ್ಶಿ ಶ್ರೀ ಭಾಸ್ಕರ ಭಟ್ ಮಂಗಳಾದೇವಿ, ಯೋಗೀಶ್ ಮುಚ್ಚಿಂತಾಯ ಹಾಗೂ ಕೃಷ್ಣ ಐತಾಳ್ ಮುಖ್ಯ ಅತಿಥಿಗಳಾಗಿದ್ದರು.
ವಲಯಾಧ್ಯಕ್ಷ ಸತೀಶ್ ಭಟ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಖಜಾಂಜಿ ಗುರು ಪ್ರಸಾದ್ ತಂತ್ರಿ ಅವರು ಈ ಸಾಲಿನ ಆಯ ವ್ಯಯ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.
ಈ ಬಾರಿಯ ಶೈಕ್ಷಣಿಕ ಸಾಧಕರಾದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ೯೫% ಅಧಿಕ ಅಂಕ ಪಡೆದ ಸಾತ್ವಿಕ್ ಶಬರಾಯ ಮತ್ತು ಅವನಿ ರಾವ್ ಅವರನ್ನು ಸನ್ಮಾನಿಸಲಾಯಿತು.
ವಲಯದ ಕಾರ್ಯದರ್ಶಿ ಪ್ರಸನ್ನ ಕುಮಾರ್ ನಿರೂಪಿಸಿದರು.
ನಂತರ ಶಿವಳ್ಳಿ ಸಭಾ ವಲಯ ಸದಸ್ಯರ ವತಿಯಿಂದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆದು ವಿಶೇಷ ಆಟಿ ಖಾದ್ಯ ಗಳ ಉಪಾಹಾರ ಕಾರ್ಯಕ್ರಮ ನಡೆಯಿತು.
(ಚಿತ್ರ ಇದೆ ಶೈಕ್ಷಣಿಕ ಸಾಧಕರಾದ ಸಾತ್ವಿಕ್ ಶಬರಾಯ ಮತ್ತು ಅವನಿ ರಾವ್ ಅವರನ್ನು ಸನ್ಮಾನಿಸಲಾಯಿತು.)