Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೊಳವಳ್ಳಿ ಶಿವರಾಯರು ಸಹಕಾರಿ ಸಂಘದ ದಿಗ್ಗಜರು:.ಎಚ್ ವಸಂತ ಬರ್ನಾಡ್




ಹಳೆಯಂಗಡಿ:ಅವಿಭಜತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ರಾಂತಿಯನ್ನು ಮಾಡಿ ಸಹಕಾರಿ ಕ್ಷೇತ್ರವು ಇಂದು ಇಷ್ಟು ಉನ್ನತ ಮಟ್ಟಕ್ಕೆ ಸಾಧನೆ ಮಾಡಬೇಕಾದರೆ ಅದಕ್ಕೆ ಮೊಳವಳ್ಳಿ ಶಿವರಾಯರೇ ಸ್ಪೂರ್ತಿ. ಇಂತಹ ದಿಗ್ಗಜರ ದೂರ ದೃಷ್ಟಿಯುಳ್ಳ ಚಿಂತನೆ ಯಿಂದಾಗಿ ಇಂದು ಸಾವಿರಾರು ಸಹಕಾರಿ ಕೇಂದ್ರಗಳು ಸ್ಥಳೀಯವಾಗಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಜನ ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ ಎಂದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ವಸಂತ ಬರ್ನಾಡ್ ನುಡಿದರು.ಅವರು  ಸೊಸೈಟಿ ಪ್ರಧಾನ ಕಚೇರಿಯಲ್ಲಿ ಮೊಳವಳ್ಳಿ ಶಿವರಾಯರ ಜನ್ಮದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಳೆ ಯಂಗಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ,ಪಿಸಿಎ ಬ್ಯಾಂಕಿನ ಮಾಜಿ ನಿರ್ದೇಶಕರಾದ ಅಬ್ದುಲ್ ಖಾದರ್ ಮತ್ತು ಮುಲ್ಕಿ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾದ ಶಂಕರ ಪಡಂಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಲೆಕ್ಕಿಗರಾದ ಲೋಲಾಕ್ಷಿ ಸ್ವಾಗತಿಸಿ ,ಹಳೆಯಂಗಡಿ ಶಾಖ ಪ್ರಬಂಧಕರಾದ ಪ್ರಜ್ಞ ಶ್ರೀ ವಂದಿಸಿದರು.

ಸಾಲ ವಿಭಾಗದ  ಪ್ರಬಂಧಕರಾದ ಮೋಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.