Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...





ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಗೆ 2025-26 ನೇ ಸಾಲಿನ ಸಹಕಾರಿ ಬ್ಯಾಂಕಿನ ವಿಶಿಷ್ಟ ಸಾಧನ ಪ್ರಶಸ್ತಿ

ಮಂಗಳೂರು: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪಡುಬಿದ್ರಿ, ಕಿನ್ನಿಗೋಳಿ, ಮೂಡಬಿದ್ರೆಯಲ್ಲಿ ಶಾಖೆ ಹೊಂದಿದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ 2025-26 ನೇ ಸಾಲಿನ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರು ಸರ್ವತೋಮುಖ ಅಭಿವೃದ್ಧಿಗಾಗಿ "ಸಾಧನಾ ಪ್ರಶಸ್ತಿ" ಯನ್ನು  ಮಂಗಳೂರಿನ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿ ನೀಡಿದರು.
 ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ  ಡಾ. ಎಂ ಎನ್ ರಾಜೇಂದ್ರ ಕುಮಾರ್ ರವರು ಈ ಪ್ರಶಸ್ತಿಯನ್ನು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ   ಎಚ್ ವಸಂತ್ ಬರ್ನಾಡ್ ರವರಿಗೆ ಪ್ರಧಾನ ಮಾಡಿದರು. 
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ, ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕ  ಡಾ. ಬೆಳಪು ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ಯೂನಿಯನ್ ಸಹಕಾರಿ ಅಧ್ಯಕ್ಷ ಶಶಿಕುಮಾರ್ ರೈ , ಸಹಕಾರಿ ಇಲಾಖೆಯ ಉಪನಿಬಂಧಕ  ರಮೇಶ್  ಎನ್ ,  ಲಾವಣ್ಯ,ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು,  ಸದಾಶಿವ ಉಳ್ಳಾಲ್, ಭಾಸ್ಕರ್ ಕೋಟ್ಯಾನ್ ಇರುವತ್ತೂರು ಮೊದಲಾದವರು ಜೊತೆಗಿದ್ದರು.



ಸದಸ್ಯರ ಸಹಕಾರ, ನಿರ್ದೇಶಕರುಗಳ ಮಾರ್ಗದರ್ಶನ, ಗ್ರಾಹಕರ ಪ್ರೋತ್ಸಾಹ ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ಸತತ 3ನೇ ಬಾರಿ ಕೇಂದ್ರ ಸಹಕಾರಿ ಬ್ಯಾಂಕಿನ *"ಸಾಧನ ಪ್ರಶಸ್ತಿ"
    - ಎಚ್ ವಸಂತ್ ಬೆರ್ನಾರ್ಡ್
         ಅಧ್ಯಕ್ಷರು
ಪ್ರಿಯದರ್ಶಿನಿ ಕೋ ಅಪರೇಟಿವ್  ಸೊಸೈಟಿ ಹಳೆಯಂಗಡಿ