Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಚಿತ್ರಾಪು: ಆಟಿಯಾ ಆಚರಣೆಗಳು ಅರ್ಥಪೂರ್ಣವಾಗಿರಬೇಕು- ಭಾರತಿ

ಮುಲ್ಕಿ:ಚಿತ್ರಾಪು ಯುವಕ ಯುವತಿ ಮಂಡಲ  ಮತ್ತು ಮಹಿಳಾ ಮಂಡಲ ಹಾಗೂ ಮಂಗಳೂರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಶ್ರೀ ಧ ಗ್ರಾ. ಯೋ.ಸಹಯೋಗದಲ್ಲಿ 
"ಆಟಿದ ತಿನಸ್ ದ ಸ್ಪರ್ಧೆ ಚಿತ್ರಾಪು "ಸ. ಹಿ. ಪ್ರಾ. ಶಾಲೆಯಸಭಾ ಭವನದಲ್ಲಿ  ನಡೆಯಿತು
ಸಭೆಯ ಅಧ್ಯಕ್ಷತೆಯನ್ನು ಯುವಕ ಯುವತಿ ಮಂಡಲದ ಅಧ್ಯಕ್ಷ ಆಯುಷ್ ವಹಿಸಿದ್ದರು 
 ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಸ್ಪರ್ಧೆಯ  ತೀರ್ಪುಗಾರರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಕು. ಭಾರತಿ ಮಾತನಾಡಿ ಹಿಂದಿನ ಕಾಲದ ಆಷಾಢ ಮಾಸದ ಕಷ್ಟದ ದಿನಗಳನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸುವ ಕಾರ್ಯವಾಗಬೇಕು. ಆಟಿಯ ಆಚರಣೆ ಕೇವಲ ಶೋಕಿಗಾಗಿ ನಡೆಯದೆ ಅರ್ಥಪೂರ್ಣವಾಗಿರಬೇಕುಎಂದರು
ಸಂಸ್ಥೆಯ ಹಿರಿಯ ಸದಸ್ಯ ಸಮಾಜ ಸೇವಕ. ವಾಸು ಪೂಜಾರಿ ರವರು  ಆಟಿ ತಿಂಗಳ ಮಹತ್ವ, ತುಳುನಾಡಿನಲ್ಲಿ ಆಟಿಯ ತಿಂಗಳಲ್ಲಿ ನಡೆಯುವ ಸಂಸ್ಕೃತಿ ಮತ್ತು ಆಧುನಿಕತೆಯ ಜಗತ್ತಿನಲ್ಲಿ ಆಟಿಯ ತಿಂಗಳಲ್ಲಿ ಸೇವಿಸುವ ವಿವಿಧ ಆಹಾರಗಳ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು ಶೇಖರ್ ಕುಂದರ್ ದುಬೈ,  ಧ ಗ್ರಾ ಯೋ.ಯ ಒಕ್ಕೂಟದ ಅಧ್ಯಕ್ಷೆ ಸುಂದರಿ ಹಾಗೂ ಚೇತನ ಉಪಸ್ಥಿತರಿದ್ದರು , ಮಹಿಳಾ ಮಂಡಲದ ಅಧ್ಯಕ್ಷೆ ಸಾವಿತ್ರಿ ಭಟ್  ಸ್ವಾಗತಿಸಿದರು. ಕಾರ್ಯದರ್ಶಿ ಮಾರ್ಗರೆಟ್ ಸುಧರ್ಶಿನಿ ನಿರೂಪಿಸಿದರು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಣೆಯನ್ನು ಮಾಡಲಾಯಿತು.ಮತ್ತು ಬಂದ ಸಭಿಕರಿಗೆ ಆಟಿದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು