Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ: ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ 'ಫಿದಾಕ ಮೀಲಾದ್ ಫೆಸ್ಟ್'

ಕಿನ್ನಿಗೋಳಿ: ಪ್ರವಾದಿ ಮುಹಮ್ಮದ್ (ಸ.ಅ) ಜನ್ಮ ದಿನಾಚರಣೆ ಪ್ರಯುಕ್ತ ಶನಿವಾರ ಇಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ನೂರುಲ್‌ ಇಸ್ಲಾಂ ಯೂತ್ ಕಮಿಟಿ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಮದ್ರಸ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮ  'ಫಿದಾಕ ಮೀಲಾದ್ ಫೆಸ್ಟ್' ಜರುಗಿತು.‌ 

ಕಾರ್ಯಕ್ರಮವನ್ನು ದುವಾ ಮತ್ತು ಆಶೀರ್ವಚನದೊಂದಿಗೆ ಮಸೀದಿಯ ಖತೀಬ್ ಮೊಹಮ್ಮದ್ ನೌಷಾದ್ ಅಝ್ಹರಿ ಅಲ್ ಫುರ್ಖಾನಿ ಉದ್ಘಾಟಿಸಿದರು. ಎಂಜೆಎಂ‌ ಕಿನ್ನಿಗೋಳಿ ಅಧ್ಯಕ್ಷ ಮೊಹಮ್ಮದ್ ರಫೀಕ್ ಫ್ಲವರ್ ಅಧ್ಯಕ್ಷತೆ ವಹಿಸಿದ್ದರು.

ಕೆಜೆಎಂ ಗುತ್ತಕಾಡು ಖತೀಬ್ ಉಮರುಲ್ ಫಾರೂಕ್ ಸಖಾಫಿ, ಎಂಜೆಎಂ ಕಿನ್ನಿಗೋಳಿ ಮಾಜಿ ಖತೀಬ್ ಅಬ್ದುಲ್ ಲತೀಫ್ ಸಖಾಫಿ,‌ ಕೆಜೆಎಂ ಗುತ್ತಕಾಡು ಅಧ್ಯಕ್ಷ ಟಿ.ಎ. ಹನೀಫ್, ಬಿಜೆಎಂ ಪಕ್ಷಿಕೆರೆ ಅಧ್ಯಕ್ಷ ಹಾಜಿ ಕೆ.ಯು. ಮೊಹಮ್ಮದ್ ನೂರಾನಿಯ, ಎಂಜೆಎಂ ಪುನರೂರು ಖತೀಬ್ ಮೊಹಮ್ಮದ್ ಅಶ್ರಫ್ ಸ‌ಅದಿ, ಮಾಜಿ ಕಾರ್ಯದರ್ಶಿ ಪಿ‌ಎಸ್ ರಿಝ್ವಾನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ವೇದಿಕೆಯಲ್ಲಿ ಉದ್ಯಮಿ ಕೆ.ಎಂ. ಅಶ್ರಫ್ ಹಾಜಿ,  ಎಂಜೆಎಂ ಪುನರೂರು ಅಧ್ಯಕ್ಷ ಫಾರೂಕ್ ಪುನರೂರು, ಬಿಜೆಎಂ ಮಾಜಿ ಉಪಾಧ್ಯಕ್ಷ ಹಾಜಿ ಪಳ್ಳಿ ಕುಟ್ಟಿ, ಮೊಹಮ್ಮದ್ ಅಲಿ ಗೋಳಿಜೋರ, ಎಂಜೆಎಂ ಕಿನ್ನಿಗೋಳಿ ಗೌರವಾಧ್ಯಕ್ಷ ಹಾಜಿ ಟಿಹೆಚ್ ಮಯ್ಯದ್ದಿ, ಬಿಜೆಎಂ ಸಾಗ್ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ನೂರುಲ್ ಇಸ್ಲಾಂ ಯೂತ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಸ‌ಅದ್ ಉಪಸ್ಥಿತರಿದ್ದರು. 

ಹಿದಾಯತುಲ್ಲಾ ಸ್ವಾಗತಿಸಿ, ಇರ್ಷಾದ್ ನಿರೂಪಿದರು.