ಬೆಂಗಳೂರು: ವಿಶೇಶ್ವರಭಟ್ ರವರು ಪತ್ರಿಕಾ ರಂಗಕ್ಕೆ ನೀಡಿದ ಕೊಡುಗೆ ಅಪಾರ- ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
ಜನಪ್ರಿಯ "ವಿಶ್ವವಾಣಿ" ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ರವರ ಬರವಣಿಗೆಯಲ್ಲಿ ಹೊರತಂದಿರುವ (ಎರಡು ಪುಸ್ತಕ)ಅಂತರಂಗದ ಬ್ಲೂ ಟಿಕ್ - ask the ಎಡಿಟರ್ 4 ಪ್ರತಿಯನ್ನು ಅಧ್ಯಾತ್ಮಿಕ ವಿಶ್ವ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಗೆ ವಿಶ್ವೇಶ್ವರ್ ಭಟ್ ರವರು ಗೌರವ ಪೂರ್ವಕವಾಗಿ ನೀಡಿದರು.
ಈ ಸಂದರ್ಭ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಮಾತನಾಡಿ ವಿಶೇಶ್ವರ ಭಟ್ಟರು ಉತ್ತಮ ವಾಗ್ಮಿಯಾಗಿದ್ದು, ಸರಸ್ವತಿಯ ವರಪುತ್ರರಾಗಿ ಪತ್ರಿಕಾ ರಂಗಕ್ಕೆ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿ ಆಶ್ರಮದ ಪರವಾಗಿ ಅವರನ್ನು ವಿಶೇಷ ಗೌರವ ನೀಡಿ ಸನ್ಮಾನಿಸಿದರು.
ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್. ಉದ್ಯಮಿ ರಾಹುಲ್ ಸಿ ಭಟ್ ಕಾನೂನು ಸಲಹೆಗರರಾದ ರಾಘವ್ ಸೂರ್ಯ ಹೆಗ್ಡೆ ಸಂಚಾಲಕರಾದ ಪುನೀತ್ ಕೃಷ್ಣ ಉಪಸ್ಥಿತರಿದ್ದರು.