Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...




ಬಜ್ಪೆ ಮನೆ ಕುಸಿತಗೊಂಡ ಸ್ಥಳಕ್ಕೆ ಪ.ಪಂ ಅಧ್ಯಕ್ಷ ಲೊಕೇಶ್ ಪೂಜಾರಿ ಹಾಗೂ ಹಿತರಕ್ಷಣಾ ವೇದಿಕೆ ನಿಯೋಗ ಭೇಟಿ ಪರಿಶೀಲನೆ

ಬಜಪೆ:ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿನ್ನಿಪದವು  ಸಮೀಪದ ಮರವೂರು ಮೋಣಾಕಾ ಅವರ ಮನೆಯು ಸಂಪೂರ್ಣವಾಗಿ  ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯೊಳಗಿದ್ದವರು ಆಪಾಯದಿಂದ ಪಾರಾಗಿದ್ದಾರೆ.ಆದರೆ ಮನೆ ಸಂಪೂರ್ಣವಾಗಿ ಕುಸಿದಿರುವುದರಿಂದ ಕುಟುಂಬಕ್ಕೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ.ಘಟನಾ ಸ್ಥಳಕ್ಕೆ  ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೊಕೇಶ್ ಪೂಜಾರಿ,ಪ.ಪಂ ಕೌನ್ಸಿಲರ್ ಗಳು ಹಾಗೂ ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆಯ ನಿಯೋಗವು  ಭೇಟಿ ನೀಡಿ, ಹಾನಿಗೊಳಗಾದ ಮನೆ ಹಾಗೂ ಕುಟುಂಬದ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು.

 ಈ ಸಂದರ್ಭ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೊಕೇಶ್ ಪೂಜಾರಿ, ಬಜ್ಪೆ ನಾಗರೀಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ, ಉಪಾಧ್ಯಕ್ಷ  ಇಸ್ಮಾಯಿಲ್ ಇಂಜಿನಿಯರ್, ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ, ಸ್ಥಳೀಯ ಕೌನ್ಸಿಲರ್ ವೀಣಾ, ಸಾಮಾಜಿಕ ಕಾರ್ಯಕರ್ತೆ  ಶ್ರೀಮತಿ ಧನವಂತಿ ,ಮಾಜಿ ಗ್ರಾ ಪಂ ಸದಸ್ಯರಾದ ನಜೀರ್  ಕಿನ್ನಿಪದವು, ಅಫೀಜ್ ಕೊಳಂಬೆ  ,ಸಲಾಂ ಹಾಗೂ ಸ್ಥಳೀಯರು ಜೊತೆಗಿದ್ದರು.