Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...




ಬಜಪೆ ಶಾಂತಿಗುಡ್ಡೆ ಪ್ರದೇಶ ಭೂಸ್ವಾಧೀನಪಡಿಸಿ - ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ

ಬಜಪೆ:ಮಂಗಳೂರು ತಾಲೂಕಿನ ಬಜಪೆ ಶಾಂತಿಗುಡ್ಡೆ ಸರ್ವೆ ನಂಬ್ರ 138/1,105 ಮನೆಗಳಿರುವ ಈ ಭೂ ಪ್ರದೇಶವು ಬಪರ್ ಝನ್ (ನಿಷೇದಿತ ವಲಯ) ವ್ಯಾಪ್ತಿಯಲ್ಲಿ ಬರುವುದಾಗಿದ್ದು, ಕೈಗಾರಿಕಾ ವಲಯದ ಆವರಣಕ್ಕೆ ತಾಗಿಕೊಂಡೆ ಇರುವುದಾಗಿ ಈಗಾಗಲೇ ಜಿಲ್ಲಾಡಳಿತ ಸೂಚನೆಯ ಪ್ರಕಾರ ಹಸಿರು ವಲಯಕ್ಕೆ ಸಂಬಂಧಪಟ್ಟಂತೆ 27 ಎಕ್ರೆ ಭೂಸ್ವಾಧೀನ ಪ್ರಕ್ರಿಯೆಯ ಜೊತೆಗೆ ಸತತ 20 ವರ್ಷಗಳಿಂದ ಕೈಗಾರಿಕಾ ವಲಯದ ದುಷ್ಪರಿಣಾಮಗಳನ್ನು ಎದುರಿಸುತ್ತಾ ಬಂದಿರುವ ಬಜಪೆ ಶಾಂತಿಗುಡ್ಡೆ (138/1)ನ ಎಕ್ರೆ ಜಾಗವನ್ನು ಒಳಗೊಳ್ಳುವಂತೆ ಪ್ರಕ್ರಿಯೆಯನ್ನು ಸುಮಾರು 4 ಕಾರ್ಯಗತಗೊಳಿಸಬೇಕಾಗಿ ಸ್ಥಳೀಯ ನಿವಾಸಿಗಳು  ಈಗಾಗಲೇ ಮನವಿಯನ್ನು ನೀಡಿದ್ದರು.ಬಜಪೆ ಗ್ರಾಮದ ಶಾಂತಿಗುಡ್ಡೆ ಭೂ ಪ್ರದೇಶದಲ್ಲಿರುವ 105 ಕುಟುಂಬಗಳ ಸಂರಕ್ಷಣೆಯ ಸಲುವಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸುವಂತೆ ವಿಧಾನ ಪರಿಷತ್ ನ ಕಲಾಪದ   ಶೂನ್ಯ ವೇಳೆಯಲ್ಲಿ   
ವಿಧಾನ ಪರಿಷತ್ ನ ಶಾಸಕ ಐವನ್ ಡಿ ಸೋಜ ಅವರು  ಸಭಾಪತಿಯವರ ಮೂಲಕ 
 ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಗಮನ ಸೆಳೆದರು.

 ಮಂಗಳೂರಿನ ತಾಲೂಕಿನ ಬಜ್ಪೆ ಗ್ರಾಮದ ಸರ್ವೆ ಸಂಖ್ಯೆ 138/1 ಶಾಂತಿಗುಡ್ಡೆ ಪ್ರದೇಶದಲ್ಲಿ 105 ಕುಟುಂಬಗಳು ಕಳೆದ 20 ವರ್ಷಗಳಿಂದ ಕೈಗಾರಿಕೆಗಳ ಮಾಲಿನ್ಯದಿಂದಾಗಿ ತೀವು ತರನಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಸ್ಯೆಯ ಬಗ್ಗೆ 2007 ರಿಂದಲೂ ಪ್ರಾರಂಭಗೊಂಡಿರುತ್ತದೆ. ಈ ಹಿಂದೆ ಹಲವು ಬಾರಿ ಸರಕಾರದ ಮಟ್ಟದಲ್ಲಿ ಸಂಬಂಧಪಟ್ಟವರ ಗಮನ ಸೆಳೆದಿರುತ್ತದೆ. ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ 21/11/2007 ರಂದು, KIADB ಯಿಂದ 28/2 ನೋಟಿಸು ಜಾರಿಯಾಗಿದ್ದು. 17.01.2008ರಲ್ಲಿ ಈ ಬಗ್ಗೆ ವಿಚಾರಣಾ ಪ್ರಕ್ರಿಯೆ ನಡೆದಿರುತ್ತದೆ. ಸದರಿ ಸಮಸ್ಯೆಯ ಬಗ್ಗೆ ಸ್ಥಳೀಯ ಮತ್ತು ರಾಜ್ಯ, ರಾಷ್ಟ್ರಮಟ್ಟದ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಹಲವು ಬಾರಿ ಗಮನ ಸೆಳೆಯುವ ವರದಿಗಳು ಪ್ರಕಟಗೊಂಡಿದೆ.

ಪ್ರಸಕ್ತ ಸದರಿ ಜಮೀನಿನ ಪಕ್ಕದಲ್ಲಿ ಕಾರ್ಯರಂಭಗೊಂಡಿರುವ ಹಾಗೂ ಕಾರ್ಯರಂಭಗೊಳ್ಳಲಿರುವ ಕೈಗಾರಿಕೆಗಳಿಂದ ಕೈಗಾರಿಕಾ ವಲಯದ ಆವರಣಕ್ಕೆ ತಾಗಿಯೇ ಇರುವ ಶಾಂತಿಗುಡ್ಡೆ ಕಾಲನಿ ನಿವಾಸಿಗಳು ಈಗಾಗಲೇ MRPL ಹಾಗೂ MSEZ ನ ಸಭಾಪಸಾದಾರಿಕೆಗಳಿಂದ ಮಾಲಿನ್ಯ ಪೂರಿತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇನ್ನಷ್ಟು ತೀವ್ರಗೊಳ್ಳುವ ಆತಂಕ ಉಂಟಾಗಿದೆ. MRPLನ ಕೋಕ್ ಹಾಗೂ ಸಲ್ಪರ್ ಘಟಕದ ಹಾರು ಬೂದಿಯ ದುಷ್ಪರಿಣಾವುಗಳನ್ನು ಎದುರಿಸುತ್ತಿದ್ದಾರೆ.