Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...





ಪವಿತ್ರ ಕುರ್‌ಆನ್ ಕಂಠಪಾಠ ಪದವಿ ಪಡೆದ ವಿದ್ಯಾರ್ಥಿಗಳಿಗೆ ಟೀಂ ಕರಾವಳಿ ವತಿಯಿಂದ ಸನ್ಮಾನ

ಬಜಪೆ:ಎಂ.ಜೆ .ಎಂ. ಬಜ್ಪೆ ಇಸ್ಲಾಮಿಕ್ ಎಜುಕೇಷನ್ ಸೆಂಟರ್‌ನ  ಕಾಲೇಜಿನಲ್ಲಿ ಪವಿತ್ರ ಕುರ್‌ಆನ್ ಕಂಠಪಾಠ ಮಾಡಿ ಹಾಫಿಜ್ ಪದವಿ ಪಡೆದ ವಿದ್ಯಾರ್ಥಿಗಳನ್ನು  ಟೀಂ ಕರಾವಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಟೀಂ ಕರಾವಳಿಯ ಸ್ಥಾಪಕ ಅಧ್ಯಕ್ಷ ನಿಸಾರ್ ಕರಾವಳಿ ಅವರ ನೇತೃತ್ವದ ತಂಡವು ವಿದ್ಯಾರ್ಥಿಗಳನ್ನು ಗೌರವಿಸಿ, ಅಭಿನಂದನೆಗಳನ್ನು ಸಲ್ಲಿಸಿತು.

ಪವಿತ್ರ ಕುರ್‌ಆನ್ ಕಂಠಪಾಠದ ಮೂಲಕ ಧಾರ್ಮಿಕ ಜ್ಞಾನವನ್ನು ಸಂಪಾದಿಸಿದ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯವಾಗಿದ್ದು, ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ,ಟೀಂ ಕರಾವಳಿ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದ್ದಾರೆ.