Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರಾಮಾಣಿಕತೆ ಮೆರೆದ ಸೆಲಿಂ ಅಧ್ಯಪಾಡಿಯವರಿಗೆ ಅದ್ದೂರಿ ಸನ್ಮಾನ

ಬಜಪೆ:ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ, ಮುರನಗರದ ಸೌಹಾರ್ದ ನಗರದ ಯುವಕರ ತಂಡದ ವತಿಯಿಂದ   ನಗದು ಸಹಿತ ಹಲವು ಬೆಳೆಬಾಳುವ ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ   ಸೆಲೀಂ ಅಧ್ಯಪಾಡಿಯವರಿಗೆ  ಅದ್ದೂರಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಇವರು ವಿವಿಧ ಸಂದರ್ಭಗಳಲ್ಲಿ ಅವರಿಗೆ ಸಿಕ್ಕಿದ್ದ ₹4 ಲಕ್ಷ ನಗದು, ಎರಡು ಫೋನ್‌ಗಳು, ಚಿನ್ನ ಹಾಗೂ ₹40 ಸಾವಿರ ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಅವರು ಸಂಬಂಧಿಸಿದವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದರು.

ಅವರ ಈ ಪ್ರಾಮಾಣಿಕತೆ ಹಾಗೂ ಮಾನವೀಯ ಕಾರ್ಯವನ್ನು ಮೆಚ್ಚಿದ ಸೌಹಾರ್ದ ನಗರದ ಯುವಕರ ತಂಡವು ಸೆಲೀಂ ಅಧ್ಯಪಾಡಿಯವರನ್ನು ಗೌರವಿಸಿ, ಅದ್ದೂರಿಯಾಗಿ ಸನ್ಮಾನಿಸಿತು.

ಈ ಸಂದರ್ಭದಲ್ಲಿ ಯುವಕರು ಹಾಗೂ ಸ್ಥಳೀಯರು ಅವರ ಪ್ರಾಮಾಣಿಕ ಸೇವೆಯನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.