ಪೊರ್ಕೊಡಿ:ಮನೆಯಲ್ಲಿ ಕಳವು,ಚಿನ್ನ ಹಾಗೂ ನಗದು ಕಳವುಗೈದ ಕಳ್ಳರು
ಬಜಪೆ:ಮನೆಯ ಮುಂದುಗಡೆಯ ಮುಖ್ಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಅಂದಾಜು 1 ಲ.ರೂ ಕ್ಕಿಂತಲೂ ಹೆಚ್ಚಿನ ಮೌಲ್ಯದ ಚಿನ್ನ ಹಾಗೂ 20 ಸಾವಿರಕ್ಕಿಂತಲೂ ಹೆಚ್ಚು ನಗದನ್ನು ಎಗರಿಸಿ ಪರಾರಿಯಾದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊರ್ಕೋಡಿಯಲ್ಲಿ ಗುರುವಾರ ರಾತ್ರಿ ನಡೆದಿದೆ.ಪೊರ್ಕೋಡಿಯ ಈದ್ಗಾ ಮಸೀದಿ ಬಳಿಯ ನಿವಾಸಿ ಮೊಹಮ್ಮದ್ ಸೈಪುಲ್ಲ ಅವರು ಗುರುವಾರ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆಂದು ಮನೆ ಮಂದಿ ಎಲ್ಲರೂ ಹೋಗಿದ್ದು,ಶುಕ್ರವಾರ ತಮ್ಮ ಮನೆಗೆ ವಾಪಾಸು ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರು ರಾತ್ರಿ ವೇಳೆ ಕಪಾಟಿನಲ್ಲಿದ್ದ 3 ಪಿಂಗರ್ ರಿಂಗ್,1ಬ್ರಾಸ್ ಲೈಟ್ ,1 ಚಿನ್ನದ ಸರ ಹಾಗೂ ಲಾಕರ್ ಸಮೀತ 20 ಸಾವಿರಕ್ಕಿಂತಲೂ ಹೆಚ್ಚು ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಬಜಪೆ ಠಾಣಿಯಲ್ಲಿಪ್ರಕರಣ ದಾಖಲಾಗಿದೆ.
1ಲ.ರೂ ಕ್ಕಿಂತಲೂ ಹೆಚ್ಚಿನ ಮೌಲ್ಯದ ಚಿನ್ನ ಹಾಗೂ 20 ಸಾವಿರಕ್ಕಿಂತಲೂ ಹೆಚ್ಚು ನಗದು ಕಳವು ಆಗಿದ್ದು ಈ ಬಗ್ಗೆ ಕಳ್ಳರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಜಪೆ ಸರ್ಕಲ್ ಇನ್ಸ್ಫೆಕ್ಟರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮೊಹಮ್ಮದ್ ಸೈಪುಲ್ಲ ಅವರು ಆ.26 ರಂದು ಸಿರಸಿಯಲ್ಲಿನ ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದೆ.ಆ.28 ರಂದು ವಾಪಾಸ್ಸು ಬಂದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಲಾಗಿದೆ. ಮಗಳ ಮದುವೆಗೆಂದು ಕೂಡಿಟ್ಟ ಹಣ ಸಹಿತ ಚಿನ್ನಾಭರಣಗಳನ್ನು ಲಾಕರ್ ಸಹಿತ ಕಳ್ಳರು ಕಳವುಗೈದಿದ್ದು,ಮನೆಯ ಎಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿತ್ತು ಎಂದರು.