Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಜ್ಪೆ:ಮಸ್ಜಿದುರ್ ರಹ್ಮಾನ್ ಮಸೀದಿ ವತಿಯಿಂದ ವಿಜೃಂಭಣೆಯ ಮೀಲಾದ್ ರ್ಯಾಲಿ



ಬಜ್ಪೆ: ಪ್ರವಾದಿ ಪೈಗಂಬರ್ ಮುಹಮ್ಮದ್ ﷺ ಅವರ ಪವಿತ್ರ ಜನ್ಮದಿನದ ಪ್ರಯುಕ್ತ ಮಸ್ಜಿದುರ್ ರಹ್ಮಾನ್ ಮಸೀದಿ, ನ್ಯೂ ಸೈಟ್ ವತಿಯಿಂದ ಬೃಹತ್ ಮೀಲಾದ್ ರ್ಯಾಲಿ ನಡೆಯಿತು.

ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಉಸ್ತಾದರು, ಊರಿನ ಹಿರಿಯರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ರ್ಯಾಲಿಯಲ್ಲಿ ಭಾಗವಹಿಸಿದರು.

ಮಸೀದಿಯ ಉಪಾಧ್ಯಕ್ಷ ನಿಸಾರ್ ಕರಾವಳಿ ಅವರು ಧ್ವಜ ಹಸ್ತಾಂತರಿಸುವ ಮೂಲಕ ಸ್ಕೌಟ್ ಅಲ್ ಮದೀನಾ ತಂಡ ಹಾಗೂ ದಫ್ ತಂಡಕ್ಕೆ ಚಾಲನೆ ನೀಡಿದರು. ಬಳಿಕ ಮೀಲಾದ್ ರ್ಯಾಲಿಯು ವಿವಿಧ ಘೋಷಣೆಗಳು ಹಾಗೂ ಮೀಲಾದ್ ಹಾಡುಗಳೊಂದಿಗೆ ಶಿಸ್ತುಬದ್ಧವಾಗಿ ಸಾಗಿತು.

ರ್ಯಾಲಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಹಿತಿಂಡಿ ಹಾಗೂ ಪಾನೀಯಗಳನ್ನು ವಿತರಿಸಲಾಯಿತು. ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರ್ಯಾಲಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.

ಶಾಂತಿ, ಸೌಹಾರ್ದತೆ ಮತ್ತು ಶಿಸ್ತಿನಿಂದ ನಡೆದ ಮೀಲಾದ್ ರ್ಯಾಲಿಯು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಮಸೀದಿ ಆಡಳಿತ ಸಮಿತಿ, ಉಸ್ತಾದರು, ತಂಡಗಳ ಸದಸ್ಯರು, ಸ್ವಯಂಸೇವಕರು ಹಾಗೂ ಸಾರ್ವಜನಿಕರಿಗೆ ಆಯೋಜಕರು ಕೃತಜ್ಞತೆ ಸಲ್ಲಿಸಿದರು.