Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎರ್ ಪೋರ್ಟ್ ನಿಂದ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ,ಪ್ರತಿಭಟನೆ

ಬಜಪೆ: ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳ ನಿರಂತರ ನಿರ್ಲಕ್ಷ್ಯ ಧೋರಣೆ ಯಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿ ಸುತ್ತಿದ್ದು ಮೂಲಸೌಕರ್ಯಗಳ ಕೊರತೆ, ರಸ್ತೆಗಳ ದುರಸ್ತಿ ಮತ್ತು ಸ್ಥಳೀಯರ ಸಮಸ್ಯೆಗಳಿಗೆ ಅಧಿ ಕಾರಿಗಳು ಸ್ಪಂದಿಸದಿರುವುದನ್ನು ಖಂಡಿಸಿ  ಶನಿವಾರದಂದು ಬಜಪೆ ಪಟ್ಟಣ ಪಂಚಾಯತ್‌ನ ಕೌನ್ಸಿಲರ್‌ಗಳ ನೇತೃತ್ವದಲ್ಲಿ   ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಬೃಹತ್ ಪ್ರತಿಭಟನೆಯು ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ 
ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಮಾತನಾಡಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು 2024 ರಿಂದ 2026 ರವರೆಗೆ ಯಾವುದೇ ರೀತಿಯಲ್ಲಿ ಸಂಬಂಧಪಟ್ಟ ಪಂಚಾಯತ್ ಹಾಗೂ ಸಾರ್ವಜನಿಕರ ಬೇಡಿಕೆಗಳಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಿಲ್ಲ.ಜಿಲ್ಲಾಡಳಿತ  ಅಥವಾ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗುವಂತಹ ಸಂದರ್ಭ ದಲ್ಲಿ ಸ್ಪಂದಿಸಬೇಕು.ಆದರೆ ಯಾವುದೇ ಸ್ಪಂದನೆಯನ್ನು ನೀಡದಿದ್ದರಿಂದ  ಪಕ್ಷಾತೀತವಾಗಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಲಾಗಿದೆ  ಎಂದರು.ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿನ  ನೀರು ಸರಾಗವಾಗಿ ಹರಿದುಹೋಗದೆ   ಕೆಲ ತಗ್ಗುಪ್ರದೇಶಗಳು ಮುಳುಗಡೆಯ ಭೀತಿ ಎದುರಾಗಿದೆ.ಪ್ರತಿ ಮಳೆಗಾಲದ ಸಂದರ್ಭದಲ್ಲೂ ಈ ಸಮಸ್ಯೆಇದ್ದು, ಇದುವರೆಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.ಮುಖ್ಯವಾಗಿ ಕೃಷಿಕರು ಕೂಡ ಸಮಸ್ಯೆಯನ್ನು ಅನುಭವಿಸುವಂತಾಗಿದೆ.ಈ ಬಗ್ಗೆ ಅಧಿಕಾರಿಗಳು ಸ್ಫಂದಿಸುವ ಕಾರ್ಯವನ್ನು ಕೂಡಲೇ ಮಾಡಬೇಕಿದೆ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಅವರು ಪ್ರತಿಭಟನೆಗೆ ನೈತಿಕ ಬೆಂಬಲವನ್ನು ನೀಡಿ ಮಾತನಾಡಿ  ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಟೇಬಲ್ ಟಾಪ್ ಮಾದರಿಯಾದಗಿದ್ದು, ಇಲ್ಲಿ ಮಳೆ ನೀರು ಹರಿದು ಹೋಗಲು ವೈಜ್ಞಾನಿಕ ವ್ಯವಸ್ಥೆ ಇಲ್ಲ.ಧಾರಾಕಾರ ಮಳೆಯಾದರೆ ಈ ವಿಮಾನ ನಿಲ್ದಾಣದ ಕೆಳ ಭಾಗದಲ್ಲಿರುವ ಜನರ ಬದುಕು ನರಕವಾಗುತ್ತದೆ. ಮನೆಯ ಒಳಗೆ ನೀರು ನುಗ್ಗಿ ಬದುಕು ಕಳೆದುಕೊಳ್ಳುವ ಭೀತಿ ಎದುರಾಗುತ್ತದೆ. ವಿಮಾನ ನಿಲ್ದಾಣದಿಂದ  ನೀರು ಹರಿದು ಬರುದರಿಂದ  ತಗ್ಗು ಪ್ರದೇಶದಲ್ಲಿರುವ  ಮನೆಗಳು ಮುಳುಗಡೆಯಾಗುತ್ತದೆ. ಈ ಹಿಂದೆ ಧಾರಾಕಾರ ಮಳೆಗೆ ಇಲ್ಲಿನ  ಕರಂಬಾರು  ಪ್ರದೇಶ ಮುಳುಗಡೆಯಾಗಿ ಕೆಲ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ , ಬಜಪೆ ಪ.ಪಂ ನ ಕೌನ್ಸಿಲರ್ ಗಳು ಮಾತನಾಡಿದರು.

ಸುಪ್ರೀತಾ ಶೆಟ್ಟಿ,ದಿನೇಶ್,ಗುಲ್ಸನ್ ಕರೀಮ್,ರಾಜೇಶ್ ಅಮೀನ್  ಹಾಗೂ  ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಬಳಿಕ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿ ರವಿ .ಜಿ ಅವರಿಗೆ ಮನವಿಯನ್ನು ನೀಡಲಾಯಿತು.


ಪ್ರತಿಭಟನೆಯು ಬೆಳಿಗ್ಗಿನಿಂದ ಆರಂಭಗೊಂಡು ಸಂಜೆ 4 ರ ತನಕ ನಡೆಯಲಿದ್ದು,ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು  ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳು  ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದ್ದರಿಂದ ಮಧ್ಯಾಹ್ನಕ್ಕೆ ಪ್ರತಿಭಟನೆಯನ್ನು ತಾತ್ಕಲಿಕವಾಗಿ ಕೈ ಬಿಡಲಾಯಿತು. ಸಂಸದರು,ಶಾಸಕರು,ಜಿಲ್ಲಾಡಳಿತ  ಹಾಗೂ ಬಜಪೆ ಪಟ್ಟಣ ಪಂಚಾಯತ್ ನ  ಅಧ್ಯಕ್ಷರು,ಕೌನ್ಸಿಲರ್ ಗಳನ್ನು ಕರೆದು ಸಭೆ ನಡೆಸಿ ಸಮಸ್ಯೆಗೆ ಪರಿಹರಿಬೇಕು.ಹಾಗೂ 15 ದಿನಗಳ ಗಡುವು ನೀಡಿ  ತಾತ್ಕಲಿಕವಾಗಿ ಪ್ರತಿಭಟನೆಯನ್ನು  ಕೈಬಿಡಲಾಯಿತು.ಸಮಸ್ಯೆಗಳಿಗೆ ಪರಿಹಾರ ಸಿಗದೆಹೊದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟದ ಎಚ್ಚರಿಕೆಯನ್ನು ಕೌನ್ಸಿಲರ್ ಗಳು ನೀಡಿದರು.