ಉಳೆಪಾಡಿ ಕರ್ಕಾಟಕ ಮಾಸದ ಮಾರಿಪೂಜೆ
ಕಿನ್ನಿಗೋಳಿ :ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಾಲಯದಲ್ಲಿ ಜು.21 ರ ಮಂಗಳವಾರ ಕರ್ಕಾಟಕ ಮಾಸದ ( ಆಟಿ ತಿಂಗಳ )ಮಾರಿಪೂಜೆ ನಡೆಯಲಿದೆ .
ಬೆಳಿಗ್ಗೆ 5:30 ರಿಂದ ಬಿಂಬಶುದ್ಧಿ, ಕಲಶ ಪ್ರತಿಷ್ಠೆ,ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಸಂಪ್ರಾರ್ಥನೆ ನಡೆಯಲಿದೆ.
ಪೂರ್ವಾಹ್ನ 11 ರಿಂದ ಶ್ರೀ ಮಹಮ್ಮಾಯಿ ಬ್ರಹ್ಮಲಿಂಗೇಶ್ವರ ದೇವಾಲಯದಲ್ಲಿ ಬಲಿ ಸೇವೆ,ಗದ್ದಿಗೆ ಪೂಜೆ ನೆರವೇರಲಿದ್ದು ನಂತರ ಮಂತ್ರದೇವತೆ, ಗುಳಿಗ ದೈವಗಳಿಗೆ ಊರ ಪರವೂರ ಭಕ್ತರ ಆಟಿ ತಿಂಗಳ ವಿಶೇಷ ಆರಾಧನೆ ನಡೆಯಲಿದೆ.
ಅಪರಾಹ್ನ 12:30 ಕ್ಕೆ ಮಹಾಪೂಜೆ ಅನ್ನಸಂತರ್ಪಣೆ ನಂತರ ರಾತ್ರಿ ಅಗೇಲು ಸೇವೆ ನಡೆಯಲಿದ್ದು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕೆಂದು ದೇವಾಲಯದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ವಿನಂತಿಸಿದ್ದಾರೆ .