ಪ್ರಕೃತಿಯ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಿ - ಜಗದೀಶ್ .ಕೆ
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ಮೇರಾ ಯುವ ಭಾರತ್ ಮೈ ಭಾರತ್ ದ. ಕ ಜಿಲ್ಲೆ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ . ಕ ಜಿಲ್ಲೆ,
ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ, ದ.ಕ ಜಿಲ್ಲೆ ಮಾರ್ಗದರ್ಶನದಲ್ಲಿಜಿಲ್ಲಾ, ರಾಜ್ಯ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ ಸಯುಂಕ್ತ ಆಶ್ರಯದಲ್ಲಿ ಜು.12 ರ ರವಿವಾರದಂದು ತೋಕೂರು ಸರಕಾರಿ ಹಿರಿಯ ಪ್ರಾರ್ಥಮಿಕ ಹಿಂದುಸ್ತಾನಿ ಶಾಲೆಯ ವಠಾರದಲ್ಲಿ ಬಾದಾಮಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಮೇರಾ ಯುವ ಭಾರತ್,ಮೈ ಭಾರತ್ ದ .ಕ ಜಿಲ್ಲೆ ಆಡಳಿತಾಧಿಕಾರಿ ಜಗದೀಶ್ ಕೆ. ಮಾತನಾಡಿ ಪ್ರತಿ ಒಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪೋಷಣೆ ಮಾಡುವ ಸಂದೇಶದೊಂದಿಗೆ ಪ್ರಕೃತಿಯ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯತೆ ಇದೆ ಎಂದರು.
ಈ ಸಂದರ್ಭ ಮೇರಾ ಯುವ ಭಾರತ್ ಮೈ ಭಾರತ್ ದ . ಕ ಜಿಲ್ಲೆ ಆಡಳಿತಾಧಿಕಾರಿ ಜಗದೀಶ್.ಕೆ, ಪಡುಪಣಂಬೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮೋಹನ್ ದಾಸ್, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶೋಭಾ.ವಿ.ಅಂಚನ್, ಸಂಸ್ಥೆಯ ಗೌರವ ಅಧ್ಯಕ್ಷ ನಾಯಕ್ ಲೀಲಾಧರ್ ಕಡಂಬೋಡಿ, ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಜಗದೀಶ್ ಕೋಟ್ಯಾನ್, ಮಹಿಳಾ ಕಾರ್ಯಾಧ್ಯಕ್ಷೆ ನೀಮಾ ಸನಿಲ್, ನಿಕಟ ಪೂರ್ವ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್, ಗೌರವ ಮಾರ್ಗದರ್ಶಕ ಪಾಂಡುರಂಗ ಮೇಸ್ತ, ಪದಾಧಿಕಾರಿಗಳಾದ ಸಂತೋಷ್ ದೇವಾಡಿಗ, ಜಗದೀಶ್ ಕುಲಾಲ್, ಗಣೇಶ್ ಆಚಾರ್ಯ, ಚಂದ್ರ ಸುವರ್ಣ, ಹರ್ಷಿತಾ ದೇವಾಡಿಗ, ಸಚಿನ್ ಆಚಾರ್ಯ, ಕವಿತಾ ನಾಗೇಶ್ ಸದಸ್ಯರಾದ ಪ್ರಶಾಂತ್ ಕುಮಾರ್ ಬೇಕಲ್, ದೀಪಕ್ ಸುವರ್ಣ, ಸಂಪತ್ ದೇವಾಡಿಗ, ಜಯಂತ್ ಕುಂದರ್, ಚಂದ್ರಶೇಖರ್ ದೇವಾಡಿಗ, ಶಿವ ದೇವಾಡಿಗ, ಮಹಿಳಾ ಸದಸ್ಯೆಯರಾದ ಹೇಮಾವತಿ , ಶೃತಿ ಆಚಾರ್ಯ, ಮತ್ತು ಮತ್ತಿತರರು ಪಾಲ್ಗೊಂಡಿದ್ದರು.