ತೋಕೂರು:ನೇಜಿ ನೆಡುವ ಕಾರ್ಯಕ್ರಮ
ತೋಕೂರು:ಭಾರತ ಸರಕಾರ,ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್, ಮೈ ಭಾರತ್ ದ. ಕ ಜಿಲ್ಲೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು,ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ, ದ.ಕ ಜಿಲ್ಲೆ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, 2021 ನೇ ಸಾಲಿನ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ), ತೋಕೂರು, ಹಳೆಯಂಗಡಿ ಆಶ್ರಯದಲ್ಲಿ ಜು.12 ರ ರವಿವಾರದಂದು ತೋಕೂರು ಸಿಂಧು ದೇವಾಡಿಗರವರ ಗದ್ದೆಯಲ್ಲಿ, ಹಿಮಕರ್ ಕೋಟ್ಯಾನ್ ಅವರ ಸಾರಥ್ಯದಲ್ಲಿ ನೇಜಿ ನೆಡುವ ಕಾರ್ಯಕ್ರಮವು ನಡೆಯಿತು.ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನೇಜಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಸಂಸ್ಥೆಯ ಸದಸ್ಯರು, ಸದಸ್ಯೆಯರು ಮತ್ತು ಮಕ್ಕಳು ಭತ್ತದ ಬೇಸಾಯದಲ್ಲಿ ಪಾಲ್ಗೊಂಡು ಕೃಷಿಕರ ಬದುಕಿನ ಕಷ್ಟ-ಸುಖದ ಬಗ್ಗೆ ವೈಯಕ್ತಿಕ ಅನುಭವ ಗಳಿಸುತ್ತಿದ್ದಾರೆ.
ಈ ಸಂದರ್ಭ ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ದಾಸ್, ಸಂತೋಷ್ ಕುಮಾರ್, ಸಂಸ್ಥೆಯ ಗೌರವ ಅಧ್ಯಕ್ಷ ಲೀಲಾಧರ್ ಕಡಂಬೋಡಿ,ಅಧ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ನೀಮಾ ಸನಿಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ,ಕೋಶಾಧಿಕಾರಿ ಜಗದೀಶ್ ಕುಲಾಲ್, ಜೊತೆ ಕಾರ್ಯದರ್ಶಿ ಸುನಿಲ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರ ಸುವರ್ಣ, ಉಪನಾಯಕ ಪ್ರಥಮ್ ಅಮೀನ್,ಸದಸ್ಯರಾದ ಗಣೇಶ್ ಪೂಜಾರಿ ಬೆಂಗಳೂರು, ಹಿಮಕರ್ ಕೋಟ್ಯಾನ್, ಗಣೇಶ್ ದೇವಾಡಿಗ ಪಂಜ, ಪಾಂಡುರಂಗ ಮೇಸ್ತ, ಚಂದ್ರಶೇಖರ್ ದೇವಾಡಿಗ, ಕಿರಣ್ ದೇವಾಡಿಗ, ದೀಪಕ್ ಸುವರ್ಣ, ಯುನೂಸ್,ಗಣೇಶ್ ಅಮೀನ್, ಸಂಪತ್ ದೇವಾಡಿಗ, ಶಿವ ದೇವಾಡಿಗ, ನವೀನ್ ಸುವರ್ಣ,ಮಹಿಳಾ ಸದಸೈಯರಾದ ವಾಣಿ ಮಹೇಶ್, ಪ್ರಮೀಳಾ. ಕೆ.ದೇವಾಡಿಗ,ಮಂಗಳ ಅಮೀನ್,
ಎಸ್. ಎಸ್. ಎಂ.ಜಿ ಯಂಗ್ ಬಾಯ್ಸ್ ಕ್ರಿಕೆಟ್ ತಂಡದ ಶ್ರೇಯಸ್ ದೇವಾಡಿಗ, ನಿಶಾನ್ ಅಮೀನ್, ಮೋಕ್ಷ್, ಲತೀಶ್, ಅಹನ್, ಅಧ್ವಿಕ್, ತ್ರಿಷಾ, ಪುಟಾಣಿ ಕ್ಷಿತಿ, ಗ್ರಾಮಸ್ಥರಾದ ಸುಧಾಕರ್, ಪ್ರಕಾಶ್ ಹಾಗೂ ಮತ್ತಿತ್ತರರು ಪಾಲ್ಗೊಂಡರು.