Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ತೋಕೂರು ಯುವಕ ಸಂಘ, ಮಹಿಳಾ ಮಂಡಲ ಹಾಗೂ ರೋಟರಿ ಸಮುದಾಯದಳದ ಆಶ್ರಯದಲ್ಲಿ ವನ ಮಹೋತ್ಸವ ಹಾಗೂ ನೆಟ್ಟ ಗಿಡಗಳ ನಿರ್ವಹಣಾ ಕಾರ್ಯಕ್ರಮ

ತೋಕೂರು : ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ತೋಕೂರು ಯುವಕ ಸಂಘ, ಮಹಿಳಾ ಮಂಡಲ ಹಾಗೂ ರೋಟರಿ ಸಮುದಾಯದಳದ ಆಶ್ರಯದಲ್ಲಿ ವನ ಮಹೋತ್ಸವ ಹಾಗೂ ನೆಟ್ಟ ಗಿಡಗಳ ನಿರ್ವಹಣಾ ಕಾರ್ಯಕ್ರಮ ನಡೆಯಿತು. 
ಯುವಕ ಸಂಘದ ಅಧ್ಯಕ್ಷ ವಾಮನ ಎಸ್. ದೇವಾಡಿಗ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ  ಮೇಘನಾ  ಅಡಿಗ , ರೋಟರಿ ಸಮುದಾಯ ದಳದ ಅಧ್ಯಕ್ಷ ಪರಮೇಶ್ವರ ಎಸ್, ವಿಶ್ವ ಬ್ಯಾಂಕ್ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಸಿ ಕೋಟ್ಯಾನ್ ರವರು ಉಪಸ್ಥಿತರಿದ್ದು, ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ನೆಟ್ಟ ಗಿಡಗಳ ನಿರ್ವಹಣೆಯನ್ನು ಮಾಡಲಾಯಿತು.ಯುವಕ ಸಂಘ, ಮಹಿಳಾ ಮಂಡಲ ಹಾಗೂ ರೋಟರಿ ಸಮುದಾಯ ದಳದ ಸದಸ್ಯರು ಉಪಸ್ಥಿತರಿದ್ದರು.