Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಯುವ ಪೀಳಿಗೆ ಕೃಷಿಯ ಮಹತ್ವವನ್ನು ಅರಿತುಕೊಳ್ಳುವ ಅಗತ್ಯವಿದೆ - ಉಮಾನಾಥ ಕೋಟ್ಯಾನ್

ತೋಕೂರು:  ಜಿಲ್ಲಾ ಪ್ರಶಸ್ತಿ ವಿಜೇತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ ಮತ್ತು ಶ್ರೀ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ  ನೇತೃತ್ವದಲ್ಲಿ  ಅಲಯನ್ಸ್ ಕ್ಲಬ್ ಕಿನ್ನಿಗೋಳಿ  ಸಹಯೋಗದಲ್ಲಿ   5ನೇ ವರ್ಷದ ಬಲೇ ಕೆಸರ್ಡ್ ಗೊಬ್ಬುಗ-2026  ಕಾರ್ಯಕ್ರಮವು ಜು.12 ರ ಆದಿತ್ಯವಾರ ತೋಕೂರು ಬಡಗಬೆಟ್ಟು ಗದ್ದೆಯಲ್ಲಿ  ನಡೆಯಿತು. ಮುಲ್ಕಿ ಮೂಡಬಿದಿರೆ  ಕ್ಷೇತ್ರದ ಶಾಸಕ  ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ  
ಇಂದಿನ ಯುವ ಪೀಳಿಗೆ ಕೃಷಿಯ ಮಹತ್ವವನ್ನು ಅರಿತುಕೊಳ್ಳುವ ಅಗತ್ಯವಿದೆ.ಈ ಬಗ್ಗೆ ಯುವಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳ ಜೊತೆಗೆ ಕೃಷಿ ಬದುಕನ್ನು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕು ಎಂದರು. ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಕಾರ್ಯಕ್ರಮದ  ಅಧ್ಯಕ್ಷತೆ  ವಹಿಸಿದ್ದರು.ಪಕ್ಷಿಕೆರೆ  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ  ಪ್ರಧಾನ ಅರ್ಚಕ  ವೇದಮೂರ್ತಿ ಪಂಜ ವಾಸುದೇವ ಭಟ್ ಆಶೀರ್ವಚನ ನೀಡಿದರು. ಕಿನ್ನಿಗೋಳಿ ಅಲಯನ್ಸ್ ಕ್ಲಬ್  ಅಧ್ಯಕ್ಷ ಅಲೋಯ್ ,   ಸಂತೋಷ್ ಆಚಾರ್ಯ, ಜಗದೀಶ ಕೆ,ಮೈ ಭಾರತ್ ದ. ಕ.,ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ   ಚಿತ್ತರಂಜನ್ ಬೋಳಾರ್, ತಿರುಮಲ ಅ್ಯಡ್ಸ್ ನ ಮಾಲಕ    ಚರಣ್.ಜೆ.ಶೆಟ್ಟಿ ಕುಳಾಯಿಗುತ್ತು,  ಪಡುಪಣಂಬೂರು ಗ್ರಾಮ ಪಂಚಾಯತ್ ಪಿ.ಡಿ.ಒ ಸುಧೀರ್,ಕೆಮ್ರಾಲ್ ಪಂಚಾಯತ್ ಕಾರ್ಯದರ್ಶಿ  ಕೇಶವ, ತುಳುವೆರೆ  ಕಲಾ  ಟ್ರಸ್ಟ್ ನ  ಅಧ್ಯಕ್ಷ  ಶ್ರೀಮತಿ ಗೀತಾ ಲಕ್ಷ್ಮೀಶ್,  ಜಯರಾಮ ಆಚಾರ್ಯ ಕೊಯಿಕುಡೆ, ಸಿವಿಲ್ ಕಂಟ್ರಾಕ್ಟರ್, ಜೈ ತುಳುನಾಡ್ ನ   ಸ್ಥಾಪಕ ಸಮಿತಿ ಸದಸ್ಯ ಹಾಗೂ  ಮಾಜಿ ಅಧ್ಯಕ್ಷ   ಉದಯ ಪೂಂಜಾ ತಾಳಿಪಾಡಿಗುತ್ತು ,  ಕೃಷಿಕ ಲಕ್ಷ್ಮಣ್ ಕೋಟ್ಯಾನ್  ಬಡಗಬೆಟ್ಟು ತೋಕೂರು, ಶ್ರೀವಿನಾಯಕ ಮಿತ್ರ ಮಂಡಳಿಯ ಗೌರವಾಧ್ಯಕ್ಷ   ಧನಂಜಯ್ ಪಿ ಶೆಟ್ಟಿಗಾರ್,ಶ್ರೀ ವಿನಾಯಕ ಮಹಿಳಾ ಮಂಡಳಿಯ  ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ.ಡಿ.ಶೆಟ್ಟಿಗಾರ್, ಮಂಡಳಿಯ ಅಧ್ಯಕ್ಷ  ಧನರಾಜ್ ಅಂಚನ್ ,ಸಾಂಸ್ಕೃತಿಕ ಕಾರ್ಯದರ್ಶಿ  ಕಿರಣ್ ಶೆಟ್ಟಿಗಾರ್ ಉಪಸ್ಥಿತರಿದ್ದರು.  ಯಜ್ಞೇಶ್ ಪಿ ಶೆಟ್ಟಿಗಾರ್  ಕಾರ್ಯಕ್ರಮ ನಿರೂಪಿಸಿದರು.  ನರೇಶ್  ವಂದಿಸಿದರು. ಜಂಟಿ  ಸಂಸ್ಥೆಯ ಸದಸ್ಯರುಗಳು, ವಿವಿಧ ಸಂಘಗಳ ಸದಸ್ಯರುಗಳು , ಪದಾಧಿಕಾರಿಗಳು ಹಾಗೂ ಸ್ಥಳೀಯರು ಪಾಲ್ಗೊಂಡರು.