ಕಾಟಿಪಳ್ಳ, ಕಟೀಲ್, ಕರ್ನಿರೆ ಲಯನ್ಸ್ ಕ್ಲಬ್ ಗಳ ಜಂಟಿ ಪದಗ್ರಹಣ
ಸುರತ್ಕಲ್: ಮನುಷ್ಯರಲ್ಲಿ ಕಷ್ಟ, ಬಡತನ, ನೋವು, ಸಂಕಷ್ಟ ಇತ್ಯಾದಿಗಳು ಸಾಮಾನ್ಯವಾಗಿದ್ದು, ಅದನ್ನು ಅರಿತು ಅದಕ್ಕನುಗುಣವಾಗಿ ಸ್ವಂದಿಸಿ, ಸಹಾನುಭೂತಿಯಿಂದ ಒಬ್ಬರಿಂದ ಒಬ್ಬರಿಗೆ ಸಹಾಯ ಮಾಡುವುದೇ ನಿಜವಾದ ಸೇವೆ, ಕೇವಲ ಹಣದ ಮೂಲಕವೇ ಸೇವೆ ಮಾಡಬೇಕೆಂದಿಲ್ಲ ಎಂದು ಲಯನ್ಸ್ ಜಿಲ್ಲೆ 317ಡಿ ಯ ಅಂತರಾಷ್ಟ್ರೀಯ ಸೇವಾನಿಧಿ ಯೋಜನೆಯ ಮುಖ್ಯ ಸಂಯೋಜಕ ವಿಜಯವಿಷ್ಣು ಮಯ್ಯ ಹೇಳಿದರು.
ಇತ್ತೀಚೆಗೆ ಸುರತ್ಕಲ್ ಲಯನ್ಸ್ ಸೆಂಟರ್ ನಲ್ಲಿ ನಡೆದ, ಲಯನ್ಸ್ ಕ್ಲಬ್ ಕಾಟಿಪಳ್ಳ - ಕೃಷ್ಣಾಪುರ, ಲಯನ್ಸ್ ಕ್ಲಬ್ ಕಟೀಲ್ - ಎಕ್ಕಾರು, ಲಯನ್ಸ್ ಕ್ಲಬ್ ಕರ್ನಿರೆ - ಬಳ್ಕುಂಜೆ ಯ 2026 -27 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಬಾಗವಹಿಸಿ ಮಾತನಾಡಿದರು.
ಕ್ರಮವಾಗಿ ಮೂರು ಕ್ಲಬ್ ಗಳ ಅಧ್ಯಕ್ಷರಾಗಿ ಪಿ. ದಯಕರ ಸುವರ್ಣ ಕುಳಾಯಿ, ಗಂಗಾಧರ ಅಮೀನ್ ಎಕ್ಕಾರು , ದಯಾನಂದ ಶೆಟ್ಟಿ ಕರ್ನಿರೆ, ಕಾರ್ಯದರ್ಶಿಗಳಾಗಿ ಗಣೇಶ್ ಶೆಟ್ಟಿ ಕಾಟಿಪಳ್ಳ, ಶೇಖರ್ ಶೆಟ್ಟಿ ಎಕ್ಕಾರು, ಸತೀಶ್ ಕುಮಾರ್ ಬಳ್ಕುಂಜೆ, ಕೋಶಾಧಿಕಾರಿಗಳಾಗಿ ವಿನೋದ್ ಕುಮಾರ್, ರೊನಾಲ್ಡ್ ಆಗ್ನೇಲ್ ಡಿಸೋಜ, ಪ್ರಶಾಂತ್ ಶೆಟ್ಟಿ ಅದಿಕಾರ ವಹಿಸಿಕೊಂಡರು.
ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ರಮೇಶ್ ರಾಥೋಡ್, ಲಯನ್ಸ್ ವಲಯ ಅಧ್ಯಕ್ಷರುಗಳಾದ ದೀಪಕ್ ಪೆರ್ಮುದೆ ಮತ್ತು ಸಂದೀಪ್ ಸುವರ್ಣ, ಲಯನ್ಸ್ ಮಾಜಿ ಗವರ್ನರ್ ಆಲ್ವಿನ್ ಪತ್ರಾವು, ವಿಲಿಯಂ ಮಸ್ಕರೇನಸ್, ಜಯೇಶ್ ಗೋವಿಂದ, ಲಿಂಗರಾಜು, ಚಂದ್ರಶೇಖರ್ ನಾನಿಲ್, ಪ್ರವೀಣ್ ಶೆಟ್ಟಿ ಮುಲ್ಕಿ, ಮಲ್ಲಿಕಾ ಆಚಾರ್ಯ, ರಾಜೇಂದ್ರ ಪಿಂಟೋ, ನಿರ್ಗಮನ ಅಧ್ಯಕ್ಷರುಗಳಾದ ಲೋಕೇಶ್ ಕುರುವನ, ಚಂದ್ರಶೇಖರ್ ಐಕಳ, ನಿರ್ಗಮನ ಕಾರ್ಯದರ್ಶಿ ಅನುಪಮಾ ಶೆಟ್ಟಿ, ನಿರ್ಗಮನ ಕೋಶಾಧಿಕಾರಿಗಳಾದ ಆನಂದ ಅಮೀನ್, ದಯಾನಂದ ರೈ, ನೆಲ್ಸನ್ ನಾರ್ಬರ್ಟ್ ಲೋಬೊ ಮೊದಲಾದವರು ಉಪಸ್ತಿತರಿದ್ದರು.
ಪುಷ್ಪರಾಜ್ ಅಡಪ ಪ್ರಾರ್ಥನೆ ಗೈದು, ಪ್ರಶಾಂತ್ ಪಿ. ಶೆಟ್ಟಿ ಕಾಟಿಪಳ್ಳ ಪದಗ್ರಹಣ ಅಧಿಕಾರಿಯವರನ್ನು ಪರಿಚಯಿಸಿ, ಪ್ರಮೀಳಾ ದೀಪಕ್ ಪೆರ್ಮುದೆ ನಿರೂಪಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ಯೋಗಗುರು ದುರ್ಗಾಪ್ರಸಾದ್ ಕಟೀಲು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.